ಪುಲ್ವಾಮಾ[ಫೆ.18]: ಪುಲ್ವಾಮಾದಲ್ಲಿ ಉಗ್ರರ ವಿರುದ್ಧ ಯೋಧರು ಆರಂಭಿಸಿದ್ದ ಸುದೀರ್ಘ ಕಾರ್ಯಾಚರಣೆ ಕೊನೆಗೂ ಕೊನೆಗೊಂಡಿದ್ದು ದಾಳಿಯ ಮಾಸ್ಟರ್ ಮೈಂಡ್ ಘಾಜಿ ರಶೀದ್ ಸೇರಿದಂತೆ ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ.
ಪುಲ್ವಾಮಾದ ಪಿಂಗಲಾನ್ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಪಡೆದಿದ್ದ ಯೋಧರು, ರಾತ್ರಿ ಸುಮಾರು 12 ಗಂಟೆಗೆ ಆ ಪ್ರದೇಶವನ್ನು ಸುತ್ತುವರೆದು ಕಾರ್ಯಾಚರಣೆ ಆರಂಭಿಸಿದ್ದರು. ಇದನ್ನರಿತ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದರು. ಈ ದಾಳಿಯಲ್ಲಿ ಸೇನಾ ಮೇಜರ್ ಸೇರಿದಂತೆ ಒಟ್ಟು 4 ಮಂದಿ ಯೋಧರು ಹುತಾತ್ಮರಾದರೆ ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ್ದ. ಆದರೆ ಯೋಧರು ತಮ್ಮ ಕಾರ್ಯಾಚರಣೆ ಮುಂದುವರೆಸಿ ಇಬ್ಬರು ಉಗ್ರರನ್ನು ಹೊಡೆರದುರುಳಿಸಿದ್ದಾರೆ.
ಯಾರು ಈ ರಶೀದ್ ಘಾಜಿ?
ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಘಾಜಿ ರಶೀದ್ ಜೈಷ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಆಜರ್ ಮಸೂದ್ ಬಲಗೈ ಬಂಟ. ಕುಪ್ವಾರಾ ಮೂಲಕ ಭಾರತದೊಳಕ್ಕೆ ನುಸುಳಿದ್ದ ಈ ಆಫ್ಗನ್ ಉಗ್ರ ಆತ್ಮಹತ್ಯಾ ದಾಳಿಯಲ್ಲಿ ಹತಾನಾಗಿದ್ದ ಅದಿಲ್‌ಗೆ ತರಬೇತಿ ನೀಡಿದ್ದ. ಫೆ.11ಕ್ಕೆ ಭಾರತೀಯ ಸೇನೆ ನಡೆಸಿದ್ದ ಎನ್ಕೌಂಟರ್ನಲ್ಲಿ ತಪ್ಪಿಸಿಕೊಂಡಿದ್ದ. ಇದಕ್ಕೂ ಮೊದಲು ಅಫ್ಜಲ್ ಗುರು ಗಲ್ಲಿಗೇರಿರಿಸಿದ ದಿನವೇ ದಾಳಿಗೆ ಯತ್ನಿಸಿ ವಿಫಲನಾಗಿದ್ದ ಆದರೆ ಶೀಘ್ರವೇ ಮತ್ತಷ್ಟು ದಾಳಿ ನಡೆಸಲು ಈತ ಸಂಚು ರೂಪಿಸಿದ್ದ. ಐಇಡಿ ಸ್ಪೆಷಲಿಸ್ಟ್ ಆಗಿದ್ದ ರಶೀದ್ ಪಿಂಗ್ಲಾನದಲ್ಲಿ ತಲೆಮರೆಸಿಕೊಂಡಿದ್ದ.