Sunday, November 24, 2024
ಸುದ್ದಿ

ಉಪ್ಪಿನಂಗಡಿ – ಕರುವೇಲು ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆದ ಹಿಂದೂ ರಾಷ್ಟ್ರ ಜಾಗೃತಿ ಸಭೆ – ಕಹಳೆ ನ್ಯೂಸ್

ಉಪ್ಪಿನಂಗಡಿ: ಇಲ್ಲಿಯ ಕರುವೇಲು ಶ್ರೀ ರಾಮ ಭಜನಾ ಮಂದಿರದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ  ಹಿಂದೂ ಧರ್ಮ ಪ್ರೇಮಿಗಳ ವತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆಯು ನಡೆಯಿತು.

ಸಭೆಯ ಉದ್ಘಾಟನೆಯನ್ನು ದೀಪಪ್ರಜ್ವಲನೆಯೊಂದಿಗೆ ಮಾಡಲಾಯಿತು. ಧಾರ್ಮಿಕ ಮುಖಂಡರಾದ  ಶ್ರೀ.ಮೋನಪ್ಪ ಆಚಾರಿ ಮರಳ ಇವರು ದೀಪಪ್ರಜ್ವಲನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ  ಶ್ರೀ. ಕರುಣಾಕರ ಅಭ್ಯಂಕರ್ ಇವರು ಉಪಸ್ಥಿತರಿದ್ದರು.
ಕಾಶ್ಮೀರದ ಪುಲವಾಮದಲ್ಲಿ ನಡೆದ ಭಯೋತ್ಪಾದಕರ ಹೇಡಿ ಕೃತ್ಯದಲ್ಲಿ ಮಣಿದ ಭಾರತೀಯ ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಲು ಸಭೆಯ ಪ್ರಾರಂಭದಲ್ಲಿ 1 ನಿಮಿಷ ಮೌನಾಚರಣೆ ಮಾಡಲಾಯಿತು; ಅವರ ಆತ್ಮಕ್ಕೆ ಸದ್ಗತಿ ದೊರಕಲು ಪ್ರಾರ್ಥಿಸಿ ಸ್ವಲ್ಪ ಸಮಯ ‘ಶ್ರೀ ಗುರುದೇವ ದತ್ತ’ ನಾಮಜಪವನ್ನು ಸಾಮೂಹಿಕವಾಗಿ ಮಾಡಲಾಯಿತು.
ಜಾತ್ಯಾತೀತ ಭಾರತ ದೇಶದಲ್ಲಿ ಜಿಹಾದಿ ಉಗ್ರರ ಅಟ್ಟಹಾಸ ತಾಂಡವಾಡುತ್ತಿದೆ, ‘ಜೈಶ್-ಎ-ಮೊಹಮ್ಮದ್ ‘ ಈ ಉಗ್ರ ಸಂಘಟನೆಯು  ಫೆಬ್ರವರಿ 14 ರಂದು ಜಮ್ಮು-ಕಾಶ್ಮೀರದ  ಪುಲವಾಮ ಜಿಲ್ಲೆಯಲ್ಲಿ  ಕೇಂದ್ರೀಯ ಮೀಸಲು ಪೋಲಿಸ್ ಪಡೆಯ ಮೇಲೆ  ರಣಹೇಡಿಯಂತೆ ದಾಳಿ ನಡೆಸಿತು, ಇದರಲ್ಲಿ ನಮ್ಮ ಸೈನಿಕ ರು  ವೀರ ಮರಣ ಹೊಂದಿದರು.
ಉಗ್ರರು ಮತ್ತು ಪಾಕಿಸ್ತಾನದ ಸೈನಿಕರು  ಭಾರತೀಯ ಸೈನಿಕರ ಹತ್ಯೆ ಮಾಡುವುದು ,ಇದು ಪಾಕಿಸ್ತಾನದ ಅಘೋಷಿತ ಯುದ್ಧದ ಒಂದು ಭಾಗವಾಗಿದೆ. ದೇಶದಲ್ಲಿ ನಡೆಯುತ್ತಿರುವ ಈ ಜಿಹಾದಿ ಉಗ್ರರ ಮಟ್ಟ ಹಾಕಬೇಕು, ಭಾರತೀಯ ಸೈನಿಕರ ಬಲಿಯನ್ನು ಪಡೆಯುವ ಪಾಕಿಸ್ತಾನದೊಂದಿಗೆ ಯಾವುದೇ ಶಾಂತಿಯುತ ಮಾತುಕತೆ ನಡೆಸದೆ ಪಾಕಿಸ್ತಾನದ ಮೇಲೆ ನೇರ ಯುದ್ಧ ಸಾರುವುದೇ ಸೂಕ್ತ ಪರಿಹಾರ ಎಂದು ತಿಳಿಸಿದರು.
ದೇಶದಲ್ಲಿ ಜಾತ್ಯತೀತೆಯ ಹೆಸರಿನಲ್ಲಿ ಅಲ್ಪಸಂಖ್ಯಾತರ ಒಲೈಕೆ ನಡೆಯುತ್ತಿದೆ ,ದೇಶದಲ್ಲಿ ಸಮಾನ ನಾಗರಿಕ ಕಾನೂನನ್ನು ಜಾರಿಗೆ ತಂದು  ದೇಶದಲ್ಲಿ ನಡೆಯುತ್ತಿರುವ ಗೋ ಹತ್ಯೆ, ಲವ್ ಜಿಹಾದ್, ಹಿಂದೂಗಳ ಮತಾಂತರ ಸಂಪೂರ್ಣ ನಿಷೇಧಿಸಲು ಕೇಂದ್ರ ಸರ್ಕಾರ ವಿಶೇಷ ಕಾನೂನು ಮಾಡಬೇಕು ಎಂದು ತಿಳಿಸಿದರು.
ಕರ್ನಾಟಕ ಸರಕಾರ ಇಂದು ದೇವಸ್ಥಾನದ ಹಣವನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ವರ್ಗಾಯಿಸಿ ಭಕ್ತರು  ಹಾಕಿದ ಹುಂಡಿ ಹಣವನ್ನು ಚರಂಡಿ  ದುರಸ್ತಿಗೆ  ಬಳಕೆ ಮಾಡುತ್ತಿದೆ. ಇಂದು ಟಿಪ್ಪು ಜಯಂತಿಗೆ  ಸರಕಾರಿದಿಂದಲೇ ಹಣ ಖರ್ಚು ಆಚರಿಸುತ್ತಾರೆ ಆದರೆ ಹಂಪಿ ಉತ್ಸವಕ್ಕೆ ಸರ್ಕಾರದಲ್ಲಿ  ಹಣವಿಲ್ಲ  ಇದು ಸರ್ಕಾರದ  ದ್ವಂದ ನೀತಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ಎಲ್ಲಾ ಸಮಸ್ಯೆಗೆ  ಏಕೈಕ ಪರಿಹಾರ  100 ಕೋಟಿಯಷ್ಟು ಹಿಂದೂಗಳಿಗಳಿರುವ  ಭಾರತದಲ್ಲಿ ಹಿಂದೂಗಳಿಗೆ ತಮ್ಮದೇ ಆದ ರಾಷ್ಟ್ರದ ಅವಶ್ಯಕತೆ ಇದೆ. 2023ಕ್ಕೆ ಕಾಲಾ ಮಹಾತ್ಮೆ ಗನುಸಾರ ಸಂತರ ಸಂಕಲ್ಪದಂತೆ  ಹಿಂದೂ ರಾಷ್ಟ ಬರಲಿದೆ ಎಂದು ತಮ್ಮ ವಿಚಾರ ಮಂಡಿಸಿದರು.
ಕಾರ್ಯಕ್ರಮವನ್ನು ಶಂಖನಾದೊಂದಿಗೆ ಆರಂಭಿಸಲಾಯಿತು. ಹಿಂದೂ ಜನಜಾಗೃತಿ ಸಮಿತಿಯ ಪರಿಚಯವನ್ನು ಶ್ರೀ. ದಯಾನಂದ ಹೆಗ್ಡೆ ಇವರು ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸೌ. ಪಾರ್ವತಿ ಜನಾರ್ದನ ಇವರು ಮಾಡಿದರು.
ಸಭೆಯಲ್ಲಿ ಶ್ರೀ ರಾಮಭಜನಾ ಮಂದಿರದ  ಅಧ್ಯಕ್ಷರಾದ ಶ್ರೀ. ಕುಶಾಲಪ್ಪ ಪೂಜಾರಿ ಹತ್ತುಕಳಸೆ, ಗೌರವಾಧ್ಯಕ್ಷರಾದ ಶ್ರೀ. ತಾರಾನಾಥ ಪಲ್ಕೆ , ಭಜನಾ ಮಂದಿರದ ಕಾರ್ಯದರ್ಶಿಗಳಾದ ಶ್ರೀ. ಪ್ರಸಾದ್ ಪಚ್ಚಾಡಿ, ಧರ್ಮಪ್ರೇಮಿಗಳಾದ ಶ್ರೀ. ಪ್ರವೀಣ, ಶ್ರೀ. ರೋಹಿತಾಶ್ವ ಬಾನಬೆಟ್ಟು,  ಶ್ರೀ. ತನಿಯಪ್ಪ ಪೂಜಾರಿ ಹೊಸಮನೆ ,ಶ್ರೀ. ಗಣೇಶ್ ಗೌಡ ಪಚ್ಚಾಡಿ ಸೇರಿದಂತೆ ಹಲವು ಧರ್ಮಪ್ರೇಮಿಗಳು  ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು