Recent Posts

Monday, January 20, 2025
ಸುದ್ದಿ

ಕೇಂದ್ರ ಸರ್ಕಾರಕ್ಕೆ ಮಧ್ಯಂತರ ಡಿವಿಡೆಂಡ್ ಸಲ್ಲಿಸಲು 28,000 ಕೋಟಿ ರೂ ನೀಡಿದ ರಿಸರ್ವ್ ಬ್ಯಾಂಕ್ – ಕಹಳೆ ನ್ಯೂಸ್

ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಮಧ್ಯಂತರ ಡಿವಿಡೆಂಡ್ ಸಲ್ಲಿಸಲು ನಿರ್ಧರಿಸಿದ್ದು, 28,000 ಕೋಟಿ ರೂ.ಗಳನ್ನು ನೀಡಲಿದೆ.

2018-19 ನೇ ಸಾಲಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ 40 ಸಾವಿರ ಕೋಟಿ ರೂಪಾಯಿ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದು, ಈಗ ಒಟ್ಟು ಮೊತ್ತ 68 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಮವಾರದಂದು ಈ ಘೋಷಣೆ ಹೊರ ಬಿದ್ದಿದ್ದು, ಇದೇ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ ಆರ್.ಬಿ.ಐ. ನ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಫೆಬ್ರವರಿ 1 ರಂದು ಮಂಡಿಸಿದ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಕುರಿತು ಚರ್ಚೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು