Tuesday, January 21, 2025
ಸುದ್ದಿ

ಪಾಕಿಸ್ತಾನಿ ಹ್ಯಾಕರ್ಸ್ ಭಾರತದ ಸೈಬರ್ ಮೇಲೆ ದಾಳಿ: 100 ಕ್ಕೂ ಹೆಚ್ಚು ವೆಬ್ಸೈಟ್ ಹ್ಯಾಕ್ – ಕಹಳೆ ನ್ಯೂಸ್

Faceless Computer Hacker

ಜಮ್ಮು-ಕಾಶ್ಮೀರದ ಪುಲ್ವಾಮ ಭಯೋತ್ಪಾದಕ ದಾಳಿ ನಂತರ ಪಾಕಿಸ್ತಾನಿ ಹ್ಯಾಕರ್ಸ್, ಭಾರತದ ಸೈಬರ್ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು 100 ಕ್ಕೂ ಹೆಚ್ಚು ವೆಬ್ಸೈಟ್ ಹ್ಯಾಕ್ ಆಗಿದೆ.

ಮಾಹಿತಿ ಪ್ರಕಾರ, ನಾಗ್ಪುರದ ಬಿಜೆಪಿ ಕಚೇರಿ, ಗುಜರಾತ್ ಸರ್ಕಾರದ ಅಧಿಕೃತ ವೆಬ್ಸೈಟ್, ಬಿಜೆಪಿ ನಾಯಕ ಐ.ಕೆ.ಜಡೇಜಾ ಬ್ಲಾಗ್ ಸೇರಿದಂತೆ ಅನೇಕ ವೆಬ್ಸೈಟ್ ಹ್ಯಾಕ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಕಿಸ್ತಾನದ ಹ್ಯಾಕರ್ಸ್, ವೆಬ್ಸೈಟ್ ಗಳನ್ನು ಹ್ಯಾಕ್ ಮಾಡಿದ್ದಾರೆಂದು ಮೂಲಗಳು ದೃಢಪಡಿಸಿವೆ. ಇದಕ್ಕೂ ಮುನ್ನ ಶನಿವಾರ ಪಾಕಿಸ್ತಾನ ವಿದೇಶಾಂಗ ಕಚೇರಿಯ ಅಧಿಕೃತ ವೆಬ್ಸೈಟ್ ಹ್ಯಾಕ್ ಆಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಗ ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ, ಭಾರತದ ಹ್ಯಾಕರ್ಸ್ ಕೆಲಸ ಎಂದಿದ್ದರು. ಅನೇಕ ದೇಶದ ಜನರು ವೆಬ್ಸೈಟ್ ಓಪನ್ ಆಗ್ತಿಲ್ಲ ಎನ್ನುತ್ತಿದ್ದಾರೆ. ಹಾಲೆಂಡ್, ಆಸ್ಟ್ರೇಲಿಯಾ, ಯುಕೆ ಮತ್ತು ಸೌದಿ ಅರೇಬಿಯಾ ದೇಶಗಳಲ್ಲಿ, ಪಾಕ್ ವಿದೇಶಾಂಗ ಸಚಿವಾಲಯದ ವೆಬ್ಸೈಟ್ ಪ್ರವೇಶಿಸಲು ಸಾಧ್ಯವಾಗ್ತಿಲ್ಲ ಎಂದಿದ್ದರು. ನಂತರ ವೆಬ್ಸೈಟ್ ಸರಿಯಾಗಿತ್ತು.

ಸೈಬರ್ ದಾಳಿ ಇಂಟರ್ನೆಟ್ ಹಾಗೂ ಕಂಪ್ಯೂಟರ್ ಮೂಲಕ ನಡೆಯುತ್ತದೆ. ಸೈಬರ್ ದಾಳಿ ತಪ್ಪಿಸಲು ಅನೇಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಸೈಬರ್ ಪೊಲೀಸರು, ಕ್ರೈಂ ತಡೆಯಲು ಸಕ್ರಿಯವಾಗಿರುತ್ತಾರೆ. ಅವ್ರ ಕಣ್ಣು ತಪ್ಪಿಸಿ ಹ್ಯಾಕರ್ಸ್ ಸೈಬರ್ ದಾಳಿ ನಡೆಸುತ್ತಾರೆ.