ನವದೆಹಲಿ : ಮಹಿಳಾ ರಕ್ಷಣಾ ಕುರಿತಾಗಿ 16 ರಾಜ್ಯ ಮತ್ತು ಕೇಂದ್ರ ಪ್ರದೇಶಗಳಲ್ಲಿ ತುರ್ತು ಸಹಾಯವಾಣಿ ಇಂದು ಅಧಿಕೃತವಾಗಿ ಜಾರಿಗೆ ಬರಲಿದೆ.
ತುರ್ತು ಸಹಾಯವಾಣಿ ನಂಬರ್ 112 ಆಗಿರಲಿದ್ದು, ಪೊಲೀಸ್, ಅಗ್ನಿ ಶಾಮಕ ದಳ, ಆರೋಗ್ಯ ಹಾಗೂ ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ಈ ಸಹಾಯವಾಣಿ ಸಹಕಾರಿಯಾಗಲಿದೆ. ಈ ಸಹಾಯವಾಣಿ ಈಗಾಗಲೇ ನಾಗಲ್ಯಾಂಡ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
112 ಇಂಡಿಯಾ ಹೆಸರಿನ ಮೊಬೈಲ್ ಆಯಪ್ ಇಂದಿನಿಂದ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹಾಗೇ ಆಯಪಲ್ ಸ್ಟೋರ್ ನಲ್ಲಿ ಲಭ್ಯವಾಗಲಿದೆ. ಆಯಪ್ ನಲ್ಲಿ ಶೌಟ್ ಎನ್ನುವ ವಿಶೇಷ ಫೀಚರ್ ಇರಲಿದೆ. ಇದು ತುರ್ತು ಸಹಾಯಕ್ಕಾಗಿ ಹೆಚ್ಚಿನ ಒತ್ತು ನೀಡಲಿದೆ.
ಆಂಧ್ರಪ್ರದೇಶ, ಉತ್ತರಾಖಂಡ, ಪಂಜಾಬ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು, ಗುಜರಾತ್, ಲಕ್ಷದ್ವೀಪ್, ಅಂಡಮಾನ್, ದಾದರ್ ನಗರ್ ಹವೇಲಿ, ದೀಯು ಮತ್ತು ದಾಮನ್, ಜಮ್ಮುಕಾಶ್ಮೀರ ಪ್ರದೇಶದಲ್ಲಿ ಕಾರ್ಯರೂಪಕ್ಕೆ ಬರುತ್ತದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.