Tuesday, January 21, 2025
ಸುದ್ದಿ

ಏರ್ ಶೋ 2019ರ ತರಬೇತಿ ವೇಳೆ ಎರಡು ವಿಮಾನಗಳು ಮುಖಾಮುಖಿ ಡಿಕ್ಕಿ – ಕಹಳೆ ನ್ಯೂಸ್

ಬೆಂಗಳೂರು: ಬೆಂಗಳೂರು ಏರ್ ಶೋ 2019ರ ತರಬೇತಿ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ. ಇಬ್ಬರು ಪೈಲೆಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಫೆ.20 ರಿಂದ 24ರ ತನಕ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಬೆಳಗ್ಗೆ 11.30ರ ಸುಮಾರಿಗೆ ಯಲಹಂಕ ಬಳಿಯ ಗಂಟಿಗಾನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಎರಡು ಸೂರ್ಯ ಕಿರಣ್ ವಿಮಾನಗಳು ತರಬೇತಿ ನಡೆಸುವ ವೇಳೆ ಮುಖಾಮುಖಿ ಡಿಕ್ಕಿಯಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಲಹಂಕ ವಾಯುನೆಲೆಯಲ್ಲಿ ಫೆ.20ರ ಬುಧವಾರದಿಂದ ಏರ್ ಶೋ ಆರಂಭವಾಗಲಿದೆ. ಆದ್ದರಿಂದ, ತರಬೇತಿ ನಡೆಸಲಾಗುತ್ತಿತ್ತು. ಇಂದು ಬೆಳಗ್ಗೆ ತರಬೇತಿ ನಡೆಸುವಾಗ ಆಕಸ್ಮಿಕವಾಗಿ ವಿಮಾನಗಳು ಡಿಕ್ಕಿಯಾಗಿವೆ.

ವಿಮಾನದ ಪೈಲೆಟ್‌ಗಳು ತುರ್ತು ನಿರ್ಗಮನ ದ್ವಾರದಿಂದ ಕೆಳಗೆ ಹಾರಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಒಬ್ಬ ಪೈಲೆಟ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುಖಾಮುಖಿ ಡಿಕ್ಕಿಯಾದ ವಿಮಾನಗಳು ಮನೆಯ ಮೇಲೆ ಬಿದ್ದಿದ್ದು ಬೆಂಕಿ ಹೊತ್ತಿಕೊಂಡಿದೆ. ಮನೆಯಲ್ಲಿ ಯಾರಿದ್ದರು? ಎಂಬುದು ಇನ್ನೂ ತಿಳಿದುಬಂದಿಲ್ಲ. ಶೆಡ್ ತರದ ಮನೆಯ ಮೇಲೆ ವಿಮಾನಗಳು ಬಿದ್ದಿದ್ದು, ಹೆಚ್ಚಿನ ಅನಾಹುತ ನಡೆದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.