Tuesday, January 21, 2025
ಸುದ್ದಿ

ಕಾಶ್ಮೀರದಲ್ಲಿರುವ ಉಗ್ರರು ಶರಣಾಗುವ ಬದಲು ಗನ್ ಹಿಡಿದರೆ ಗುಂಡಿಕ್ಕಿ ಸಾಯಿಸಲಾಗುವುದು: ಧಿಲ್ಲೋನ್ – ಕಹಳೆ ನ್ಯೂಸ್

ನವದೆಹಲಿ: ಪುಲ್ವಾಮ ಆತ್ಮಾಹುತಿ ದಾಳಿ ನಡೆದ 100 ಗಂಟೆಗಳಲ್ಲಿ ಭಾರತೀಯ ಸೇನೆ ಕಣಿವೆ ರಾಜ್ಯದಲ್ಲಿ ಜೈಷ್- ಇ- ಮೊಹಮ್ಮದ್ ಸಂಘಟನೆಯ ಉಗ್ರರನ್ನು ನಿಗ್ರಹ ಮಾಡಿದೆ.

ಫೆಬ್ರುವರಿ 14 ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಮೇಲೆ ಆತ್ಮಾಹುತಿ ದಾಳಿ ನಡೆದ 100 ಗಂಟೆಗಳಲ್ಲಿ ಜೈಷ್-ಇ- ಮೊಹಮ್ಮದ್ ಉಗ್ರ ಸಂಘಟನೆಯ ಮೂವರು ನಾಯಕರನ್ನು ಸೇನೆ ಹತ್ಯೆಮಾಡಿದೆ ಎಂದು ಶ್ರೀನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲೆ.ಜನರಲ್ ಕೆ.ಎಸ್. ಜೆ ಧಿಲ್ಲೋನ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

17 ಗಂಟೆಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಮೂವರು ಉಗ್ರ ನಾಯಕರನ್ನು ಸೇನೆ ಹತ್ಯೆಗೈದಿದ್ದು, ಈ ಚಕಮಕಿಯಲ್ಲಿ ಓರ್ವ ಮೇಜರ್ ಮತ್ತು ಮೂವರು ಯೋಧರು ಹುತಾತ್ಮರಾಗಿದ್ದಾರೆ. ಈ ಎನ್‍ಕೌಂಟರ್‌ನಲ್ಲಿ ಕಾಶ್ಮೀರ ಪೊಲೀಸ್ ಸಿಬ್ಬಂದಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮ ಆತ್ಮಾಹುತಿ ದಾಳಿ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ ಕೈವಾಡವಿದೆ. ನಾವು ಜೈಷ್- ಇ- ಮೊಹಮ್ಮ ದ್ ಸಂಘಟನೆಯ ನಾಯಕರನ್ನು ಹುಡುಕುತ್ತಿದ್ದೇವೆ. ಕಣಿವೆ ರಾಜ್ಯದಲ್ಲಿ ಜೈಷೆ ಸಂಘಟನೆಯನ್ನು ನಾವು ಮಟ್ಟಹಾಕಿದ್ದೇವೆ. ಅದೂ ಪುಲ್ವಾಮ ದಾಳಿ ನಡೆದ 100 ಗಂಟೆಗಳ ಅವಧಿಯಲ್ಲಿ ಎಂದು ಧಿಲ್ಲೋನ್ ಹೇಳಿದ್ದಾರೆ.

ಜೈಷೆ ಸಂಘಟನೆಯ ಟಾಪ್ ಕಮಾಂಡರ್, ಪಾಕ್ ಮೂಲದ ಕಮ್ರಾನ್ ಸೋಮವಾರ ನಡೆದ ಎನ್‍ಕೌಂಟರ್‍ನಲ್ಲಿ ಹತ್ಯೆಯಾಗಿದ್ದವು. ಈತ ಜೈಷೆ ಸಂಘಟನೆಯ ಪಾಕ್ ಮುಖ್ಯಸ್ಥ ಮಸೂಜ್ ಅಜರ್‌ನ ನಿಕಟವರ್ತಿಯಾಗಿದ್ದಾನೆ. ಆತ್ಮಾಹುತಿ ಬಾಂಬರ್ ಅದಿಲ್ ಅಹ್ಮದ್ ಧಾರ್ ಕೈಯಲ್ಲಿ ಪುಲ್ವಾಮದಲ್ಲಿ ಬಾಂಬ್ ಸ್ಫೋಟ ಮಾಡಿಸಿದ್ದು ಈತನೇ ಎಂದು ಶಂಕಿಸಲಾಗಿದೆ.

ಸ್ಥಳೀಯ ಕಾಶ್ಮೀರಿ ಬಾಂಬ್ ಸ್ಪೆಷಲಿಸ್ಟ್ ಹಿಲಾಲ್ ಅಹ್ಮದ್ ಮತ್ತು ಪಾಕ್ ಮೂಲದ ರಷೀದ್ ಈ ಎನ್‍ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ.

ಕಾಶ್ಮೀರದಲ್ಲಿರುವ ಉಗ್ರರು ಶರಣಾಗುವ ಬದಲು ಗನ್ ಹಿಡಿದರೆ ಅವರನ್ನು ಗುಂಡಿಕ್ಕಿ ಸಾಯಿಸಲಾಗುವುದು. ನಿಮ್ಮ ಮಕ್ಕಳು ಗನ್ ಕೈಗೆತ್ತಿಕೊಳ್ಳುವುದಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ ಎಂದು ನಾನು ಕಣಿವೆ ರಾಜ್ಯದಲ್ಲಿರುವ ಅಮ್ಮಂದಿರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ಧಿಲ್ಲೋನ್.