ಶ್ರೀರಾಮ ಪ್ರೌಢಶಾಲೆ ಪ್ರಾರಂಭಗೊಂಡ ಸ್ಥಳ ಶ್ರೀರಾಮ ಮಂದಿರಕ್ಕೆ ಶ್ರೀರಾಮ ವಿದ್ಯಾಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ತೆರಳಿ ಸರಸ್ವತೀ ಪೂಜೆ ಮಾಡಿದರು.
ಎಲ್ಲರೂ ಸರಸ್ವತೀ ಮಾತೆಯ ಭಾವಚಿತ್ರ ಹಾಗೂ ಹರಿವಾಣದಲ್ಲಿ ಹೂ ಹಿಡಿದುಕೊಂಡು ವಿದ್ಯಾಕೇಂದ್ರದಿಂದ ಸಾಲಾಗಿ ಶಿಸ್ತುಬದ್ದವಾಗಿ ಶ್ರೀರಾಮ ಮಂದಿರಕ್ಕೆ ತೆರಳಿದರು. ಮಂದಿರದಲ್ಲಿ ವಿದ್ಯಾರ್ಥಿಗಳು ಪೂಜೆ ನಡೆಸಲೆಂದೇ ವಿಶಾಲವಾದ ಚಪ್ಪರದ ವ್ಯವಸ್ಥೆ ಮಾಡಲಾಗಿತ್ತು.
ಶಿಶುಮಂದಿರದಿಂದ ಪದವಿಯವರೆಗಿನ ಎಲ್ಲಾ ವಿದ್ಯಾರ್ಥಿಗಳು ತಮ್ಮಲ್ಲಿನ ಸರಸ್ವತೀ ಭಾವಚಿತ್ರವನ್ನು ತಮ್ಮ ಮುಂಭಾಗದಲ್ಲಿ ಜೋಡಿಸಿ ಕುಳಿತು ಸರಸ್ವತೀ ಮಂತ್ರವನ್ನು ಸಾಮೂಹಿಕವಾಗಿ ಪಠಿಸಿದರು.
ಪುರೋಹಿತರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರು ಪೂಜಾ ವಿಧಾನವನ್ನು ತಿಳಿಸುದುದಲ್ಲದೇ ಪೂಜೆಯ ಮಹತ್ವವನ್ನು ತಿಳಿಸಿದರು.
ಸಭಾಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠ ಮಂಗಳೂರು ಇಲ್ಲಿನ ಸ್ವಾಮೀಜಿಗಳಾದ ಶ್ರೀ ಏಕಗಮ್ಯಾನಂದಜೀ ಇವರು ಸರಸ್ವತೀ ಮಾತೆಯ ವಿಶೇಷತೆ ವಿದ್ಯಾರ್ಥಿಗಳಿಗೆ ತಿಳಿಸಿದರು.