Thursday, November 28, 2024
ಸುದ್ದಿ

ಯೋಧರ ಮೇಲೆ ದಾಳಿ ಖಂಡಿಸಿ ಟೊಮೇಟೊ ಬೆಳೆಗಾರರಿಂದ ರೈತರ ಪ್ರತಿಭಟನೆ – ಕಹಳೆ ನ್ಯೂಸ್

ಭೋಪಾಲ್: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯನ್ನು ಖಂಡಿಸಿ, ರೈತರು ಕೂಡಾ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.

ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಟೊಮೇಟೊ ಬೆಳೆಗಾರರು ಪಾಕಿಸ್ತಾನಕ್ಕೆ ಕೃಷಿ ಉತ್ಪನ್ನವನ್ನು ರಪ್ತು ಮಾಡುವದಿಲ್ಲ ಎಂದು ಘೋಷಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಬುವಾ ಜಿಲ್ಲೆಯ ಪೆಟ್ಲವಾಡ್ ಗ್ರಾಮದ ಸುಮಾರು 5 ಸಾವಿರ ರೈತರು ಟೊಮ್ಯಾಟೋ ಬೆಳೆಗಾರರಾಗಿದ್ದು, ಪುಲ್ವಾಮಾ ದಾಳಿ ಬಳಿಕ ಈ ನಿರ್ಧಾರಕ್ಕೆ ಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟೊಮ್ಯಾಟೋ ಬೆಳೆಗಾರರಾದ ಬಸಂತಿ ಲಾಲ್ ಪಾಟಿದಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಕಳೆದ ಒಂದೂವರೆ ದಶಕದಿಂದ ನಾವು ಟೊಮ್ಯಾಟೋ ಬೆಳೆಯುತ್ತಿದ್ದೇವೆ. ದೆಹಲಿಯ ಏಜೆಂಟ್ ಮೂಲಕ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದೆವು. ರಫ್ತು ಮಾಡುವುದರಿಮ್ದ ಒಳ್ಳೆಯ ಲಾಭವೂ ಬರುತ್ತಿತ್ತು.

ನಾವು ಕಳಿಸುವ ಹಣ್ಣು ತರಕಾರಿ ತಿಂದು ನಮ್ಮ ಯೋಧರ ಮೇಲೆ ದಾಳಿ ಮಾಡುತ್ತಾರೆ. ನಮಗೆ ನಷ್ಟವಾದರೂ ಚಿಂತೆಯಿಲ್ಲ. ಪಾಕಿಸ್ತಾನಕ್ಕೆ ಟೋಮ್ಯಾಟೋ ರಫ್ತು ಮಾಡುವುದಿಲ್ಲ. ಸೈನಿಕರ ತ್ಯಾಗ ಬಲಿದಾನಕ್ಕೆ ಬೆಲೆ ಕೊಡಬೇಕಿದೆ ಎಂದಿದ್ದಾರೆ.

ಟೊಮೇಟೋ ಬೆಳೆಗಾರ ಮಹೇಂದ್ರ ಆಮದ್, ನಾವು ಪಾಕಿಸ್ತಾನಕ್ಕೆ ಟೊಮೇಟೋ ರಪ್ತು ಮಾಡಿ ಒಳ್ಳೆಯ ಹಣ ಸಂಪಾದಿಸುತ್ತೇವೆ. ಆದರೆ, ನಮಗೆ ಹಣಕ್ಕಿಂತ ನಮ್ಮ ಸೈನಿಕರ ಪ್ರಾಣ ಮುಖ್ಯ, ಸೈನಿಕರೆ ಇಲ್ಲವಾದರೆ ನಮಗೆ ರಕ್ಷಣೆ ನೀಡುವವರು ಯಾರು ಎಂದಿದ್ದಾರೆ.

ರೈತರ ಈ ನಿರ್ಧಾರದ ಬಗ್ಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ರೈತರ ದೇಶಪ್ರೇಮಕ್ಕೆ ನನ್ನ ನಮನಗಳು, ತಮ್ಮ ವೈಯಕ್ತಿಕ ಲಾಭಕ್ಕಿಂತ ಅವರಿಗೆ ದೇಶದ ಹಿತಾಸಕ್ತಿಯೇ ಮುಖ್ಯವಾಗಿರುವುದು ಖುಷಿಯ ಸಂಗತಿ ಎಂದಿದ್ದಾರೆ.

2017ರಲ್ಲಿ ಭಾರತದಿಂದ ಟೋಮ್ಯಾಟೋಗೆ ಚಿನ್ನದಂಥ ಬೆಲೆ ಸಿಕ್ಕಿತ್ತು. ಕೆಜಿಗೆ 300ರು ತನಕ ಏರಿತ್ತು. ಆದರೂ, ಭಾರತದ ಟೋಮ್ಯಾಟೋ ಖರೀದಿಸುವುದಿಲ್ಲ ಎಂದು ಹಿಂದೇಟು ಹಾಕಿದ್ದ ಪಾಕಿಸ್ತಾನ, ಬಲೂಚಿಸ್ತಾನದಿಂದ ಟೋಮ್ಯಾಟೋ, ಈರುಳ್ಳಿ ತರೆಸಿಕೊಳ್ಳುವುದಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.