Wednesday, January 22, 2025
ಸುದ್ದಿ

ಸಮಯ ಬಂದಾಗ ಎಲ್ಲವನ್ನೂ ಮಾಡಿ ತೋರಿಸುತ್ತೇವೆ: ಉಗ್ರರ ದಾಳಿಗೆ ತಿರುಗೇಟು ನೀಡಿದ ನಿರ್ಮಲಾ ಸೀತಾರಾಮನ್ – ಕಹಳೆ ನ್ಯೂಸ್

ಬೆಂಗಳೂರು: ಪುಲ್ವಾಮ ಉಗ್ರರ ದಾಳಿಗೆ ನಮ್ಮ ಯೋಧರು ಸಿದ್ದರಿದ್ದಾರೆ. ಈಗಲೂ ಯೋಧರು ದಾಳಿ ನಡೆಸಲು ತಯಾರಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿನ ದಾಳಿ ಬಗ್ಗೆ ಸಾರ್ವಜನಿಕವಾಗಿ ಹೆಚ್ಚು ಹೇಳಲು ಸಾಧ್ಯವಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ದೇಶದಲ್ಲಿ ಯಾರೂ ಕೂಡ ಊಹಿಸದಂತಹ ದುರ್ಘಟನೆ. ಅವರ ವಿರುದ್ಧ ಹೋರಾಡಲು ತಂತ್ರಗಳನ್ನು ಹೆಣೆಯಲಾಗುತ್ತಿದೆ. ಆದರೆ, ಅದರ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂಥಹ ಘಟನೆಯಿಂದ ಸೇನೆ ಕಲಿಯಬೇಕಾದದ್ದು ಸಾಕಷ್ಟಿದೆ. ಸಮಯ ಬಂದಾಗ ಎಲ್ಲವನ್ನೂ ಮಾಡಿ ತೋರಿಸುತ್ತೇವೆ. ಈ ಹಿಂದೆ ಮುಂಬೈನಲ್ಲೂ ಉಗ್ರರ ದಾಳಿ ನಡೆದಿತ್ತು.

ಸಾಕ್ಷಿ ಸಮೇತ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದೆವು. ಉಗ್ರರ ಬಗ್ಗೆ ಪಾಕ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.