Wednesday, January 22, 2025
ಸುದ್ದಿ

ಗಂಗೊಳ್ಳಿ ಠಾಣಾ ವ್ಯಾಪ್ತಿಯ ಆರಾಟೆ ಸೇತುವೆ ಮೇಲೆ ಭೀಕರ ಅಫಘಾತ – ಕಹಳೆ ನ್ಯೂಸ್

ಉಡುಪಿ: ಭೀಕರ ಅಫಘಾತ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲಿಯೇ ಮೃತ ಪಟ್ಟ ದಾರುಣ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆರಾಟೆ ಸೇತುವೆ ಮೇಲೆ ನಡೆದಿದೆ.

ಅಫಘಾತ ಸ್ಥಳದಿಂದ 2 ಕಿಲೋಮೀಟರ್ ದೂರ ಹೆಮ್ಮಾಡಿ ತನಕ ಬೈಕ್ ಎಳೆದೊಯ್ದಿದ್ದು, ಮೃತ ದೇಹ ನಜ್ಜುಗುಜ್ಜುಗಿತ್ತು, ಹೆದ್ದಾರಿಯಲ್ಲಿ ಅನಾಥವಾಗಿ ಬಿದ್ದಿದ್ದ ಮೃತದೇಹ ಗಮನಿಸಿದ ಹೈವೇ ಪೆಟ್ರೊಲ್ ವಾಹನದ ಸಿಬ್ಬಂದಿಗಳು ಗಂಗೊಳ್ಳಿ 24*7 ಹೆಲ್ಪ್ ಲೈನ್ ಸ್ವಯಂಸೇವಕರಿಗೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು, ಇವರ ಸಹಾಯದಿಂದ ಛಿದ್ರಗೊಂಡಿದ್ದ ಮೃತದೇಹ ಆಸ್ಪತ್ರೆಗೆ ರವಾನಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಪಟ್ಟ ಯುವಕಗಂಗೊಳ್ಳಿ ಸಮೀಪದ ಬಾವಿಕಟ್ಟೆ ನಿವಾಸಿ ಗಣೇಶ್ ಎಂಬವರ ಪುತ್ರ ವಿಖ್ಯಾತ್ (24) ಎಂದು ಗುರುತಿಸಲಾಗಿದ್ದು, ಈತ ಕುಂದಾಪುರದ ಹೊಟೇಲೊಂದರಲ್ಲಿ ಕೆಲಸಕ್ಕಿದ್ದ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಅಫಘಾತ ಎಸಗಿದ ವಾಹನ ಸ್ಧಳದಿಂದ ಪರಾರಿಯಾಗಿದ್ದು. ತಡರಾತ್ರಿ 12.30 ಸುಮಾರಿಗೆ ಅಫಘಾತ ನಡೆದಿರಬಹುದೆಂದು ಶಂಕಿಸಲಾಗಿದೆ.