ಬಾಗಲಕೋಟ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಯರಗಟ್ಟಿಯಲ್ಲಿ ಛತ್ರಪತಿ ಶಿವಾಜಿ ಜಯಂತಿಯನ್ನು ಆಚರಿಸಲಾಯಿತು.
ಲಾಡಖಾನ್ ಗುರುಗಳು ಕಾರ್ಯಕ್ರಮದಲ್ಲಿ ಶಿವಾಜಿ ಕುರಿತು ಮಾತನಾಡಿದರು. ಶಿವಾಜಿ ಹಾಗೂ ಮೊಗಲ್ ದೊರೆ ಔರಂಗಜೇಬನ ಮಧ್ಯ ಹೊರಾಟ ನಿರಂತರವಾಗಿ ನಡೆದಿತ್ತು. ಶಿವಾಜಿಯು 13 ವರ್ಷದಲ್ಲೇ ಖಡ್ಗ ಹಿಡಿದ ಮಹಾನ್ ದೇಶಭಕ್ತ.
ಗೆರಿಲ್ಲಾ ತಂತ್ರವನ್ನು ಬಳಸಿಕೊಂಡು ಮರಾಠ ಸಾಮ್ರಾಜ್ಯವನ್ನು ವಿಸ್ತರಿಸಿ “ಛತ್ರಪತಿ” ಎಂಬ ಬಿರುದು ಪಡೆದನು. ಶಿವಾಜಿಯ ಧೈರ್ಯ, ರಾಷ್ಟ್ರಪ್ರೇಮ ಅಂದು ಸ್ವಾತಂತ್ರ್ಯ ಸ೦ಗ್ರಾಮದಲ್ಲಿ ಬಾಲಗ೦ಗಾಧರ ತಿಲಕ್, ಆಬಾ ಪಾ೦ಗಳೆ, ಸಾವರ್ಕರ್ ನ೦ತಹ ಅಪ್ರತಿಮ ನಾಯಕರಿಗೆ ಸ್ಪೂರ್ತಿ ತುಂಬಿತು ಎಂದು ಹೇಳಿದರು.
ಈ ಸಮಯದಲ್ಲಿ ಶಾಲೆಯ ಮುಖ್ಯಗುರುಗಳಾದ ಐ.ಡಿ.ನದಾಫ್, ಬಿ.ಬಿ.ಲೋಕಾಪೂರ, ಲಾಡಖಾನ್ , ಶಮಸುದ್ದಿನ್ ಗುರಾಡಿ, ಮಗದುಮ್, ಮಠಪತಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.