ನ್ಯಾಯಾಂಗ ನಿಂದನೆ ಪ್ರಕರಣ: ರಿಲಯನ್ಸ್ ಕಮ್ಯುನಿಕೇಶನ್ ಚೇರ್ಮನ್ ಅನಿಲ್ ಅಂಬಾನಿ ಅಪರಾಧಿ: ಸುಪ್ರೀಂಕೋರ್ಟ್ – ಕಹಳೆ ನ್ಯೂಸ್
ಹೊಸದಿಲ್ಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಿಲಯನ್ಸ್ ಕಮ್ಯುನಿಕೇಶನ್ ಚೇರ್ಮನ್ ಅನಿಲ್ ಅಂಬಾನಿ ಅಪರಾಧಿ ಎಂದಿರುವ ಸುಪ್ರೀಂಕೋರ್ಟ್, ಇನ್ನು ಮೂರು ತಿಂಗಳಲ್ಲಿ 453 ಕೋ.ರೂ. ಬಾಕಿ ಮೊತ್ತಯನ್ನು ಟೆಲಿಕಾಮ್ ಉಪಕರಣ ತಯಾರಕ ಕಂಪೆನಿ ಎರಿಕ್ಸನ್‌ಗೆ ಪಾವತಿಸಬೇಕು. ಆದೇಶವನ್ನು ಪಾಲಿಸದಿದ್ದರೆ ಜೈಲಿಗೆ ಹೋಗಬೇಕು ಎಂದು ಆದೇಶ ನೀಡಿದೆ.
ಅಂಬಾನಿ ಹಾಗೂ ಇತರರ ಬಾಕಿ ಪಾವತಿ ಮಾಡಿಲ್ಲ ಎಂದು ದೂರಿ ಸ್ವೀಡನ್‌ನ ಟೆಲಿಕಾಮ್ ಉಪಕರಣ ತಯಾರಕ ಕಂಪೆನಿ ಎರಿಕ್ಸನ್ ಸುಪ್ರೀಂಕೋರ್ಟ್‌ಗೆ ದೂರು ಸಲ್ಲಿಸಿತ್ತು.
ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ಜಸ್ಟಿಸ್ ಆರ್.ಎಫ್. ನಾರಿಮನ್ ಹಾಗೂ ವಿನೀತ್ ಸಹರನ್ ಅವರಿದ್ದ ನ್ಯಾಯಪೀಠ ಎರಿಕ್ಸನ್‌ಗೆ ಬಾಕಿ ಮೊತ್ತ 550 ಕೋ.ರೂ. ನೀಡುವುದಕ್ಕೆ ಸಂಬಂಧಿಸಿ ಅನಿಲ್ ಅಂಬಾನಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಇನ್ನು 4 ವಾರದಲ್ಲಿ ಬಾಕಿ ಪಾವತಿಸಬೇಕು. ಇಲ್ಲದಿದ್ದರೆ ಜೈಲು ವಾಸ ಅನುಭವಿಸಬೇಕೆಂದು ಮಹತ್ವದ ಆದೇಶ ನೀಡಿದೆ.
ರಫೇಲ್‌ಗೆ ಅವರ ಬಳಿ ಹಣವಿದೆ. ಪ್ರತಿ ಸಂಭಾವ್ಯ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ಅವರಲ್ಲಿ ನಮಗೆ 550 ಕೋ.ರೂ. ಪಾವತಿಸಿ ನ್ಯಾಯಾಂಗ ಆದೇಶ ಪಾಲಿಸಲು ಅವರ ಬಳಿ ಹಣವಿಲ್ಲ ಎಂದು ಎರಿಕ್ಸನ್ ಇಂಡಿಯಾ ಪರ ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ ದಾವೆ ಹೇಳಿದರು.