ಉತ್ತರ ಪ್ರದೇಶ: ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ಸಿಆರ್ ಪಿಎಫ್ ನ 44 ಯೋಧರು ಹುತಾತ್ಮರಾಗಿದ್ದು, ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.
ರಾಜಸ್ಥಾನದಲ್ಲಿದ್ದ ಪಾಕಿಸ್ತಾನ ಪ್ರಜೆಗಳು 48 ಗಂಟೆಯಲ್ಲೇ ದೇಶ ಬಿಡುವಂತೆ ರಾಜಸ್ಥಾನ ಆದೇಶಿಸಿದ ಬೆನ್ನಲ್ಲೇ ಇದೀಗ ಆಗ್ರಾದಲ್ಲಿ ಹೋಟೆಲ್ ಮಾಲೀಕರೊಬ್ಬರು ಕಾಶ್ಮೀರಿಗಳಿಗೆ ಪ್ರವೇಶ ನಿಷೇಧಿಸಿ ಭಿತ್ತಿ ಪತ್ರವನ್ನು ಹಾಕಿದ್ದಾರೆ.
ಜಮ್ಮುಕಾಶ್ಮೀರದಲ್ಲಿ ಕಾಶ್ಮೀರಿಗಳು ಉಗ್ರರಿಗೆ ನೆರವು ನೀಡುತ್ತಿದ್ದಾರೆ ಎನ್ನುವ ಆರೋಪದ ಜೊತೆ ಭಾರತೀಯ ಸೇನೆ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದು, ಭಾರತೀಯರಿಗೆ ಆಕ್ರೋಶ ಹೆಚ್ಚಾಗುವಂತೆ ಮಾಡಿದ್ದು, ಇದೀಗ ಉತ್ತರ ಪ್ರದೇಶದ ಆಗ್ರಾದ ಹೋಟೆಲ್ ಮಾಲೀಕರೊಬ್ಬರು ಕಾಶ್ಮೀರಿಗಳಿಗೆ ಪ್ರವೇಶ ನಿಷೇಧ ಎಂಬ ಭಿತ್ತಿ ಪತ್ರ ಹಾಕಿದ್ದಾರೆ.