Friday, November 29, 2024
ಸುದ್ದಿ

ವಿವೇಕಾನಂದ ಸ್ನಾತಕೋತ್ತರ ಕೇಂದ್ರದಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ಒಂದು ವಿದ್ಯಾಸಂಸ್ಥೆಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ತಮ್ಮ ಅವಶ್ಯಕತೆಗಳಿಗನುಗುಣವಾದ ವ್ಯವಸ್ಥೆಯೂ ಇದ್ದಾಗ ಅಧ್ಯಯನದ ಸಾಧ್ಯತೆ ವಿಸ್ತಾರವಾಗುತ್ತದೆ.

ಆಧುನಿಕ ದಿನಗಳಲ್ಲಿ ಕಂಪ್ಯೂಟರ್ ಬಳಕೆ ಎಲ್ಲೆಡೆಯೂ ಜಾರಿಗೊಂಡಿದ್ದು, ವಿದ್ಯಾರ್ಥಿಗಳು ಅದರ ಬಳಕೆಯ ಬಗೆಗೆ ತಜ್ಞತೆ ಪಡೆದುಕೊಳ್ಳಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಕಾಲೇಜಿನ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ನೂತನ ಕಂಪ್ಯೂಟರ್ ಲ್ಯಾಬ್ ಹಾಗೂ ಅಂತರ್ಜಾಲ ಕೇಂದ್ರವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಲಿಯುವಿಕೆಯ ಹಂಬಲ ವಿದ್ಯಾರ್ಥಿಗಳಲ್ಲಿರುವುದು ಅತ್ಯಂತ ಮುಖ್ಯ. ಕಾಲೇಜಿನಲ್ಲಿ ಕೊಡಮಾಡುವ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವದ ವಿಕಸನವನ್ನು ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಉಪಯೋಗವೆನಿಸುವ ಎಲ್ಲಾ ವ್ಯವಸ್ಥೆಗಳನ್ನು ಕಾಲೇಜಿನಲ್ಲಿ ಮಾಡಿಕೊಡುವುದಕ್ಕೆ ಆಡಳಿತ ಮಂಡಳಿ ಸಿಧ್ಧವಾಗಿದೆ. ಆದರೆ ಅದರಿಂದ ಉಪಯೋಗವಾಗಬೇಕು ಮತ್ತು ನಿತ್ಯ ಬಳಕೆಯಾಗಭೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ಣಾತಕೋತ್ತರ ವಿದ್ಯಾರ್ಥಿಗಳಿಗಾಗಿ ಅನೇಕ ವ್ಯವಸ್ಥೆಗಳನ್ನು ಒದಗಿಸಿಕೊಡಲಾಗುತ್ತಿದೆ. ಅತ್ಯುತ್ತಮ ಲ್ಯಾಬ್, ಮೀಡಿಯಾ ಸೆಂಟರ್, ಸ್ಟುಡಿಯೋ ಹೀಗೆ ನಾನಾ ಅಭಿವೃದ್ಧಿ ಸಂಗತಿಗಳು ಜಾರಿಗೊಳ್ಳುತ್ತಿವೆ. ಸಕಲ ವ್ಯವಸ್ಥೆಗಳನ್ನೂ ಒಳಗೊಂಡ ಒಂದು ಮಾದರಿ ಸಂಸ್ಥೆಯಾಗಿ ವಿವೇಕಾನಂದ ಕಾಲೇಜು ಮೂಡಿಬಂದಿದೆ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ.ಶ್ರೀಧರ ಎಚ್.ಜಿ, ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ.ವಿಜಯ ಸರಸ್ವತಿ, ವಿವಿಧ ವಿಭಾಗಗಳ ಸಂಯೋಜಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.