ಮಂಗಳೂರು: ಕಳೆದ ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ 9ನೇ ತರಗತಿ ವಿದ್ಯಾರ್ಥಿನಿ ಕೊನೆಗೂ ಪತ್ತೆಯಾಗಿದ್ದು, ಆಕೆಯನ್ನ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಖಾಸಗಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಂಗಳೂರಿನ ಎಕ್ಕೂರಿನ ಬಾಲಕಿ ಕಳೆದ ಶನಿವಾರ ಶಾಲೆಗೆಂದು ತೆರಳಿದವಳು ಮರಳಿ ಮನೆಗೆ ಬಂದಿರಲಿಲ್ಲ.
ಇದೀಗ ಉಡುಪಿಯಲ್ಲಿ ಕಂಕನಾಡಿ ನಗರ ಪೊಲೀಸರು ವಿದ್ಯಾರ್ಥಿನಿಯನ್ನ ಪತ್ತೆ ಮಾಡಿದ್ದಾರೆ. ಸದ್ಯ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.