Recent Posts

Monday, January 20, 2025
ಸುದ್ದಿ

ಪ್ರತ್ಯೇಕತಾವಾದಿಗಳಿಗೆ ಬಿಸಿ ಮುಟ್ಟಿಸಿದ ಭಾರತ ಸರ್ಕಾರ – ಕಹಳೆ ನ್ಯೂಸ್

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ಆದಿಲ್ ದಾರ್ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಸಿಆರ್ ಪಿಎಫ್ ನ 44 ಯೋಧರು ಹುತಾತ್ಮರಾಗಿದ್ದರು

ಈ ಘಟನೆಯ ನಂತರ ಭಾರತ ಪ್ರತ್ಯೇಕತಾವಾದಿಗಳಿಗೂ ಬಿಸಿಮುಟ್ಟಿಸಿದೆ. ಹೌದು ಇತ್ತೀಚೆಗಷ್ಟೇ ಐವರು ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆಯನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ವಾಪಸ್ ಪಡೆದ ನಂತರ ಮತ್ತೀಗ 18 ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆಯನ್ನೂ ವಾಪಸ್ ಪಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜೊತೆಗೆ 155 ರಾಜಕಾರಣಿಗಳಿಗೆ ನೀಡಿದ್ದ ಭದ್ರತೆಯನ್ನೂ ವಾಪಸ್ ಪಡೆದಿದ್ದು, ಪಿಡಿಪಿ ಮುಖಂಡ ವಹೀದ್ ಪರ್ರಾ ಮತ್ತು ಐಎಎಸ್ ಅಧಿಕಾರಿ ಶಾ ಫೈಸರ್ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಪ್ರತ್ಯೇಕತಾವಾದಿಗಳ ಭದ್ರತೆಗೆಂದೇ ಈಗಾಗಲೇ ಕೋಟಿ ಕೋಟಿ ರೂ ಖರ್ಚು ಮಾಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರಿಗೆ ಭದ್ರತೆಯ ಅಗತ್ಯವಿಲ್ಲ. ಅಂದಮೇಲೆ ಈ ಹಣವನ್ನು ವ್ಯರ್ಥಮಾಡುವ ಅಗತ್ಯವಿಲ್ಲ ಎಂದು ಜಮ್ಮು-ಕಾಶ್ಮೀರ ಸರ್ಕಾರ ಅಭಿಪ್ರಾಯಪಟ್ಟಿದೆ.

ಭಾರತದಿಂದ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಪಾಕಿಸ್ತಾನ ಇತ್ತೀಚೆಗಷ್ಟೇ ಹುರಿಯತ್ ಮುಖಂಡರಾದ ಮೀರ್‍ವೈಜ್ ಉಮರ್ ಫಾರೂಕ್, ಪ್ರೊ. ಅಬ್ದುಲ್ ಗನಿ ಭಟ್, ಬಿಲಾಲ್ ಲೋನ್, ಜೆಕೆಎಲ್‍ಎಫ್ ನಾಯಕ ಹಾಶಿಮ್ ಖುರೇಷಿ ಮತ್ತು ಶಬೀರ್ ಶಾ ಅವರಿಗೆ ನೀಡಲಾಗಿದ್ದ ಭದ್ರತಾ ಸಿಬ್ಬಂದಿ ಮತ್ತು ವಾಹನಗಳನ್ನುಸರ್ಕಾರ ವಾಪಸ್ ಪಡೆದಿತ್ತು.