Tuesday, January 21, 2025
ಸುದ್ದಿ

ಟಿಪ್ಪು ಜಯಂತಿ ; ಕಾರ್ಯಕರ್ತರಿಗೆ ಸರಕಾರದ ಕಿರುಕುಳ, 108 – 110 ಬಾಂಡ್ | ಬಿ.ಎಸ್.ವೈ. ಗೆ ಹಸಂತಡ್ಕ ಮಾಹಿತಿ, ಬಿಎಸ್.ವೈ. ಕೆಂಡಾಮಂಡಲ.

ಪುತ್ತೂರು : ದಕ್ಷಿಣ ಕನ್ನಡದಲ್ಲಿ ಬಜರಂಗದಳ ಹಾಗು ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಟಿಪ್ಪು ಜಯಂತಿಯ ಪ್ರಯುಕ್ತ 108, 110 ಬಾಂಡ್ ಅನ್ನು ಸರಕಾರ ಪ್ರೇರಿತವಾಗಿ ಅಧಿಕಾರಿಗಳು ಪಡೆಯುತ್ತಿದ್ದು ಆದರ ಬಗ್ಗೆ ಯಡಿಯೂರಪ್ಪನವರು ಪುತ್ತೂರಿಗೆ ಬಂದಾಗ ಬಜರಂಗದಳದ ಪ್ರಾಂತ ಗೋರಕ್ಷಾ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ, ಬಿ.ಎಸ್.ವೈ ಗೆ ಮಾಹಿತಿ ನೀಡಿ ಕಾರ್ಯಕರ್ತರ ನೋವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಬಿ.ಎಸ್.ವೈ. ಸರಕಾರದ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಈ ಕುರಿತು ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಬಿ.ಎಸ್.ವೈ. ದೀಪ ಆರುವ ಸಂದರ್ಭದಲ್ಲಿ ಜೋರಾಗಿ ಉರಿಯುತ್ತದೆ. ಕಾರ್ಯಕರ್ತರ ಮೇಲಿನ ದೌರ್ಜನ್ಯ ಸಹಿಸುದಿಲ್ಲ, ಮುಂದಿನ ದಿನಗಳಲ್ಲಿ ಜನ ಇದಕ್ಕೆ ಉತ್ತರಿಸುತ್ತಾರೆ ಎಂದು ಹೇಳಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response