ಮಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷಗಳು ಮತದಾನಕ್ಕೆ ಬರ್ಜರಿ ತಯಾರಿ ಮಾಡುತ್ತಿದೆ.
ಇದರಂತೆ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಷ ಆದೇಶದ ಮೇರೆಗೆ ಪ್ರಮುಖ ಕಾರ್ಯಕ್ರಮಗಳ ಪಟ್ಟಿ ತಯಾರಾಗಿದ್ದು, ಫೆಬ್ರವರಿ 12 ರಿಂದ ಮಾರ್ಚ್ 2 ರವರೆಗೆ ‘ನನ್ನ ಪರಿವಾರ ಬಿಜೆಪಿ ಪರಿವಾರ’ ಕಾರ್ಯಕ್ರಮ ನಡೆಯಲಿದೆ.
ಫೆಬ್ರವರಿ 26 ರಂದು ‘ಕಮಲ ಜ್ಯೋತಿ ಸಂಕಲ್ಪ’ ಕಾರ್ಯಕ್ರಮ. ಮಾನ್ಯ ಪ್ರಧಾನ ಮಂತ್ರಿ ಅವರ ಸಂಘಟನಾ ಸಂವಾದ ಫೆಬ್ರವರಿ 28 ಕ್ಕೆ ನಡೆಯಲಿದೆ.
ಅಲ್ಲದೆ ವಿಜಯ ಸಂಕಲ್ಪ ಮೋಟಾರ್ ಬೈಕ್ ರಾಲಿ ಮಾರ್ಚ್ 2 ರಂದು ನಡೆಯಲಿದೆ ಎಂದು ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.