Monday, January 20, 2025
ಸುದ್ದಿ

ಯೋಧರ ಕುಟುಂಬಗಳಿಗೆ ಲಕ್ಷಾಂತರ ಹಣ ದಾನ ನೀಡಿದ ಭಿಕ್ಷುಕಿ.! – ಕಹಳೆ ನ್ಯೂಸ್

ಭಿಕ್ಷುಕಿಯೊಬ್ಬಳ ಕೊನೆಯ ಆಸೆಯಂತೇ ಸಿಆರ್‍ಪಿಎಫ್ ಹುತಾತ್ಮ ಯೋಧರ ಕುಟುಂಬಗಳಿಗೆ ಲಕ್ಷಾಂತರ ರೂ.ನೀಡಿ ಸತ್ತಮೇಲೂ ಸಾರ್ಥಕತೆ ಮೆರೆದ ಅಪರೂಪದ ಘಟನೆ ರಾಜಸ್ಥಾನದ ಅಜ್ಮೇರ್‍ನಲ್ಲಿ ನಡೆದಿದೆ.

ನಂದಿನಿ ಶರ್ಮಾ ಎಂಬ ಹೆಸರಿನ ಅಜ್ಜಿ, ತಾನು ಬದುಕಿರುವಾಗ ಅಜ್ಮೇರ್‍ನ ಬಜರಂಗಗಢ ಅಂಬೇ ಮಾತಾ ದೇವಾಲಯದ ಮುಂದೆ ಭಿಕ್ಷೆ ಬೇಡುತಾಯಿದ್ದಳು. ಹಾಗೇ ಭಿಕ್ಷೆಯಿಂದ ಬಂದ ಹಣವನ್ನ ನಿತ್ಯ ಬ್ಯಾಂಕ್‍ನಲ್ಲಿ ಠೇವಣಿ ಇಡುತ್ತಿದ್ದಳಂತೆ. ಅದೇ ಹಣದ ಭದ್ರತೆಗಾಗಿ ಇಬ್ಬರು ವಿಶ್ವಾಸಾರ್ಹ ಟ್ರಸ್ಟೀಗಳನ್ನೂ ನೇಮಿಸಿದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು

ತಾನು ಸತ್ತ ಮೇಲೆ ಆ ಹಣ ಅದೇ ಟ್ರಸ್ಟೀಗಳು ದೇಶ ಮತ್ತು ಸಾಮಾಜಿಕ ಕಾರ್ಯಕ್ಕೆ ಬಳಸಲು ಹೇಳಿದ್ದಳಂತೆ. ಹೀಗೆ ಸಾಯೋವರೆಗೂ ನಿತ್ಯ ಸಂಗ್ರಹಿಸಿಟ್ಟಿದ್ದ ಹಣ ಒಳ್ಳೇ ಕಾರ್ಯಕ್ಕೆ ಅದರಲ್ಲೂ ಹುತಾತ್ಮರಾದ ಸೈನಿಕರ ಕುಟುಂಬಕ್ಕೇ ನೀಡೋದಕ್ಕೆ ಅಜ್ಜಿ ನೇಮಿಸಿದ್ದ ಟ್ರಸ್ಟೀಗಳೂ ಕಾಯುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಮಧ್ಯೆಯೇ ನಂದಿನಿ ಅಜ್ಜಿ ಅಗಸ್ಟ್ 2018ರಲ್ಲಿ ಅನಾರೋಗ್ಯದಿಂದಾಗಿ ಪ್ರಾಣ ತ್ಯಜಿಸಿದ್ದಳು. ಆದ್ರೇ, ಅವರು ಕೂಡಿಟ್ಟಿದ್ದ ಲಕ್ಷಾಂತರ ರೂ. ಹಣ ಈಗ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಕುಟುಂಬ ಸದಸ್ಯರಿಗೆ ಸೇರಿದ್ದು, ಅಜ್ಜಿಯ ಈ ಮಹತ್ಕಾರ್ಯಕ್ಕೆ ಇಡೀ ದೇಶವೇ ಈಗ ತಲೆಬಾಗುತ್ತಿದೆ. ಕೊನೆಯ ಆಸೆ ಈಡೇರುವ ಮೂಲಕ ಸತ್ತಿರೋ ಅಜ್ಜಿಯ ಆತ್ಮಕ್ಕೆ ಈಗ ಶಾಂತಿ ಕೂಡ ಸಿಕ್ಕಿದೆ.