ಬಂಟ್ವಾಳ: ಫಲ್ಗುಣಿ ನದಿಯ ಮೂಲರಪಟ್ನ ಸೇತುವೆಯು ಕುಸಿತಕೊಂಡ ಪರಿಣಾಮವಾಗಿ ಎಡಪದವು, ಕುಪ್ಪೆಪದವು ಹೀಗೆ ಅನೇಕ ಊರುಗಳಿಗೆ ಸಂಪರ್ಕ ನಿಲುಗಡೆ ಆಗಿತ್ತು.
ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ವ್ಯಾಪಾರಿಗಳು ಪರದಾಡುವ ಸ್ಧಿತಿ ನಿರ್ಮಾಣವಾಗಿತ್ತು, ಆದ್ರೆ ಫಲ್ಗುಣಿ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗುತ್ತಿದ್ದಂತೆ ಮೂಲರಪಟ್ನ ಕುಸಿತಗೊಂಡ ಸೇತುವೆಗೆ ಪರ್ಯಾಯವಾಗಿ ನದಿಯಲ್ಲಿ ಸ್ಥಳೀಯರು, ಗುತ್ತಿಗೆದಾರರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಮಣ್ಣಿನ ರಸ್ತೆ ನಿರ್ಮಿಸಲಾಗಿದೆ.
ಆದರೆ, ಇದೀಗ ಈ ರಸ್ತೆಯಲ್ಲಿ ಅಕ್ರಮ ಮರಳುಗಾರಿಕೆಯ ಲಾರಿ ಸಾಗಾಟಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಇದರಿಂದಾಗಿ ಈ ರಸ್ತೆ ತೀರ ಹದಗೆಟ್ಟಿದೆ ಎಂಬ ಆರೋಪಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತವೆ.
ಅಕ್ರಮ ಮರಳುಗಾರಿಕೆಯ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.