ಮಂಗಳೂರು: ಹದಿನೈದು ದಿನಗಳ ಹಿಂದೆಯಷ್ಟೇ ಜಾಮೀನು ಪಡೆದು ಹೊರಬಂದಿದ್ದ ಆರೋಪಿವೋರ್ವ ಅಂತರಾಜ್ಯ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಮತ್ತೆ ಬಂಧನವಾಗಿದ್ದಾನೆ.
ಮಂಗಳೂರಿನ ಕಣ್ಣೂರು ಗ್ರಾಮದ ಕೆ.ನೂಮನ್, ಸಂಶೀರ್ ಬಂಧಿತ ಸರಗಳ್ಳರು. ಆರೋಪಿಗಳು ಮೂಡಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂತ್ಯ ಎಂಬಲ್ಲಿ ದಾರಿ ಕೇಳುವ ನೆಪದಲ್ಲಿ ಅನುಪಮ ಎಂಬವರ ಕುತ್ತಿಗೆಯಿಂದ ಚಿನ್ನದ ಚೈನ್, ಕಾಸರಗೋಡು ಜಿಲ್ಲೆ ಅದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಾರು ಎಂಬಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಚೈನ್ ಎಸ್ಕೇಪ್ ಮಾಡಿದ್ದರು.
ಆರೋಪಿಗಳಿಂದ 2 ಚಿನ್ನದ ಸರ, 2 ಮೊಬೈಲ್ ಫೋನ್ ಹಾಗೂ ಒಂದು ಹೊಂಡಾ ಡಿಯೋ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.