Saturday, November 23, 2024
ಸುದ್ದಿ

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ನಾವೂರಲ್ಲಿ ಫಲಾನುಭವಿಗಳಿಗೆ  ಗ್ಯಾಸ್ ವಿತರಣೆ – ಕಹಳೆ ನ್ಯೂಸ್

ಬಂಟ್ವಾಳ: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 126  ಫಲಾನುಭವಿಗಳಿಗೆ  ಗ್ಯಾಸ್ ವಿತರಣೆ ಕಾರ್ಯಕ್ರಮ ನಾವೂರ ಗ್ರಾ.ಪಂ.ಕಚೇರಿಯಲ್ಲಿ ನಡೆಯಿತು.

ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ ಫಲಾನುಭವಿಗಳಿಗೆ ಗ್ಯಾಸ್ ವಿತರಸಿ ಮಾತನಾಡಿದ ಅವರು ಸರಕಾರದ ಜನಪರ ಕಾಳಜಿಯ ಯೋಜನೆಗಳು ಗ್ರಾಮದ ಜನರಿಗೆ ತಲುಪಲು ಅಧಿಕಾರಿಗಳು ಶ್ರಮ ವಹಿಸಬೇಕು, ಹಾಗಾದರೆ ಮಾತ್ರ ಗ್ರಾಮಗಳು ರಾಮರಾಜ್ಯವಾಗಲು ಸಾಧ್ಯ ಎಂದು ಅವರು ಹೇಳಿದರು.
ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀಳದಂತೆ ಪ್ರಧಾನಮಂತ್ರಿಯವರು ವಿಶೇಷ ಕಾಳಜಿಯಿಂದ ಈ ಯೋಜನೆ ಜಾರಿಗೆ ತಂದಿದ್ದಾರೆ, ಇಂತಹ ಯೋಜನೆಗಳ ಸಂಪೂರ್ಣ ಲಾಭ ಪಡೆಯಲು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾವೂರ ಗ್ರಾ.ಪಂ.ಉಪಾಧ್ಯಕ್ಷ ವಿಜಯಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಜಕ್ರಿಬೆಟ್ಟು ಎಚ್.ಪಿ.ಗ್ಯಾಸ್ ಎಜೆನ್ಸಿ ಕರುಣಾಕರ ಶೆಟ್ಟಿ, ಗ್ರಾ.ಪಂ.ಸದಸ್ಯ ರಾದ ಜನಾರ್ಧನ, ಯೋಗೀಶ್, ಸದಾನಂದ, ರಾಜೀವಿ, ಶೀಲಾ, ಜಯಂತಿ ಮತ್ತಿತರ ರು ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯ ಸದಾನಂದ ನಾವೂರ ಸ್ವಾಗತಿಸಿ , ಪಿ‌ಡಿ.ಒ ರಂಜನ್ ಕುಮಾರ್ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು