Sunday, January 19, 2025
ರಾಜಕೀಯಸುದ್ದಿ

ಸ್ವ ಪಕ್ಷದವರಿಂದಲೇ ‘ಗೋ ಬ್ಯಾಕ್ ಶೋಭಕ್ಕ’ ಚಳುವಳಿ – ಕಹಳೆ ನ್ಯೂಸ್

ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಸದಸ್ಯರಾದ ಶೋಭಾ ಕರಂದ್ಲಾಜೆ ಅವರ ವಿರುದ್ಧ ಸ್ವಪಕ್ಷೀಯ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಸದೆ ವಿರುದ್ಧ ಸ್ವ ಪಕ್ಷದ ಕಾರ್ಯಕರ್ತರಿಂದಲೇ ಆಕ್ರೋಶ ವ್ಯಕ್ತವಾಗಿದ್ದು, ‘ಗೋ ಬ್ಯಾಕ್ ಶೋಭಕ್ಕ’ ಚಳವಳಿ ಆರಂಭಿಸಲಾಗಿದೆ.

‘ಗೋ ಬ್ಯಾಕ್ ಶೋಭಕ್ಕ’ ಎಂದು ಪಕ್ಷದ ಕಾರ್ಯಕರ್ತರು ಶೋಭಾ ಕರಂದ್ಲಾಜೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 5 ವರ್ಷದಿಂದ ನಾಪತ್ತೆಯಾಗಿದ್ದ ಶೋಭಾ ಕರಂದ್ಲಾಜೆ ಈಗ ಮೋದಿ ಹೆಸರಲ್ಲಿ ಮತ್ತೆ ಗೆಲ್ಲಲು ಬಂದಿದ್ದಾರೆ ಎಂದು ಟೀಕಿಸಲಾಗಿದೆ. 5 ವರ್ಷಗಳ ಬಳಿಕ ನಿಮಗೆ ಕ್ಷೇತ್ರ ನೆನಪಾಯಿತೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು