Recent Posts

Sunday, January 19, 2025
ಸುದ್ದಿ

ಮಂಗಳೂರಿನಿಂದ ಬೆಂಗಳೂರಿಗೆ ‘ವಂದೇ ಭಾರತ್ ಎಕ್ಸ್ ಪ್ರೆಸ್’ – ಕಹಳೆ ನ್ಯೂಸ್

ಭಾರತದ ಅತಿ ವೇಗದ ರೈಲು ಎಂದು ಹೆಸರಾಗಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಕರ್ನಾಟಕದಲ್ಲೂ ಶೀಘ್ರವೇ ಸಂಚರಿಸಲಿದೆ.

ಬೆಂಗಳೂರು – ಮಂಗಳೂರು, ಮಂಗಳೂರು- ಚೆನ್ನೈ, ಮಂಗಳೂರು- ಹೈದರಾಬಾದ್ ನಡುವೆ ಈ ರೈಲು ಸಂಚರಿಸಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಈ ಮಾರ್ಗಗಳಲ್ಲಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಮ್ ಕೂಡ ಅಳವಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಫೆಬ್ರವರಿ 15 ರಂದು ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ಎಂಜಿನ್ ರಹಿತ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದರು. ಸದ್ಯ ಈ ರೈಲು ದೆಹಲಿ ಹಾಗೂ ವಾರಣಾಸಿ ನಡುವೆ ಸಂಚಾರ ನಡೆಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು