Monday, January 20, 2025
ಸುದ್ದಿ

ಟಿಪ್ಪು ಹೆಸರಿನಲ್ಲಿ ರಾಜಕೀಯ | ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ 108/ 110 ಬಾಂಡ್ ವಿಧಿಸಲು ಅವರೇನು ತಪ್ಪು ಮಾಡಿದ್ದಾರೆ ? – ಅಶೋಕ್ ರೈ.

ಪುತ್ತೂರು : ರಾಜ್ಯದಲ್ಲಿ ತೀರ್ವ ಗೊಂದಲಕ್ಕೆ ಕಾರಣವಾದ ಟಿಪ್ಪು ಜಯಂತಿಯ ಆಚರಣೆಯನ್ನು ಖಂಡಿಸಿ ಕಹಳೆ ನ್ಯೂಸ್ ಗೆ ಹೇಳಿಕೆ ನೀಡಿದ ಬಿ.ಜೆ.ಪಿ. ಮುಖಂಡ ಅಶೋಕ್ ರೈ ವ್ಯಾಪಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಯಾವುದೇ ಮುಸ್ಲಿಮರು ಟಿಪ್ಪು ಜಯಂತಿ ಬೇಕು ಎಂದು ಸರಕಾರಕ್ಕೆ ಕೇಳಿರಲಿಲ್ಲ, ಕೇವಲ ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸಲು, ಹಿಂದೂಗಳನ್ನು, ಕ್ರಿಶ್ಚಿಯನ್ನರನ್ನು ನೋಯಿಸುವ ಉದ್ದೇಶದಿಂದ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದ ಅವರು, ಸರಕಾರ ಬಜರಂಗದಳ ಮತ್ತು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಿಗೆ 108/110 ಬಾಂಡ್ ವಿಧಿಸಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ಸಾಮಾನ್ಯ ಕಾರ್ಯಕರ್ತರನ್ನು ಹಿಂಸಿಸೂದನ್ನು ಸಹಿಸಲು ಸಾಧ್ಯವಿಲ್ಲ, ಎಲ್ಲಾ ಕಾರ್ಯಕರ್ತರ ಜೊತೆಗಿದ್ದೇವೆ, ಕಾರ್ಯಕರ್ತರು, ಪಕ್ಷಕ್ಕಾಗಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ದ ಎಂದು ಹೇಳಿದ್ದಾರೆ. ಇಷ್ಟಕ್ಕೂ ಕಾರ್ಯಕರ್ತರ ಮೇಲೆ ಬಾಂಡ್ ವಿಧಿಸಲು ಅವರೇನು ತಪ್ಪು ಮಾಡಿದ್ದಾರೆ? ಸಮಾಜದ ಕಾರ್ಯ ಮಾಡುತ್ತಿರುವದು, ಹಿಂದೂ ಸಂಸ್ಕೃತಿಯ ರಕ್ಷಣೆ ಮಾಡುತ್ತಿರುವುದು ತಪ್ಪೇ ಎಂದು ಸರಕಾರಕ್ಕೆ ಪ್ರಶ್ನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response