Sunday, January 19, 2025
ಸುದ್ದಿ

ಸರಿಗಮಪ ಸೀಸನ್ 15’ರ ವಿನ್ನರ್ ಪಟ್ಟ ಕ್ಲಾಸಿಕಲ್ ಕಿಂಗ್ ಮಂಗಳೂರಿನ ಕೀರ್ತನ್ ಹೊಳ್ಳ ಮುಡಿಗೆ – ಕಹಳೆ ನ್ಯೂಸ್

ಸರಿಗಮಪ ಸೀಸನ್ 15′ ಗ್ರಾಂಡ್ ಫಿನಾಲೆಯ ತೀರ್ಪು ಹೊರ ಬಂದಿದೆ. ಕಾರ್ಯಕ್ರಮದ ವಿನ್ನರ್ ಆಗಿ ಕೀರ್ತನ್ ಹೊಳ್ಳ ಹೊರಹೊಮ್ಮಿದ್ದಾರೆ. ಹನುಮಂತಣ್ಣ ಎರಡನೇ ಸ್ಥಾನವನನ್ನು ಪಡೆದಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಂತಿಮ ಹಂತಕ್ಕೆ ಹೃತ್ವಿಕ್, ಸಾಧ್ವಿನಿ, ಕೀರ್ತನ್ ಹೊಳ್ಳ, ಹನುಮಂತಣ್ಣ, ವಿಜೇತ್ ಹಾಗೂ ನಿಹಾಲ್ ಬಂದಿದ್ದರು. ಫೈನಲ್ ವೇದಿಕೆ ಮೇಲೆ ಈ ಐದು ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯಿತು. ಇದರಲ್ಲಿ ಕೀರ್ತನ್ ಹೊಳ್ಳ ವಿಜೇತರಾಗಿದ್ದಾರೆ. ಫೈನಲ್ ಹಂತದಲ್ಲಿ ಎರಡು ಸುತ್ತುಗಳು ಇತ್ತು. ಮೊದಲ ಹಂತದಲ್ಲಿ ಆರು ಸ್ಪರ್ಧಿಗಳು ಇದ್ದು, ಎರಡನೇ ಹಂತಕ್ಕೆ ಮೂರು ಸ್ಪರ್ಧಿಗಳು ಆಯ್ಕೆ ಆದರು. ವಿಜೇತ್, ನಿಹಾಲ್ ಹಾಗೂ ಹೃತ್ವಿಕ್ ಕೊನೆ ಹಂತದಲ್ಲಿ ಎಡವಿದರು. ಕೀರ್ತನ್, ಹನುಮಂತಣ್ಣ ಹಾಗೂ ಸಧ್ವಿನಿ ಟಾಪ್ 3 ಸ್ಪರ್ಧಿಗಳಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೀರ್ತನ್ ಸಿಕ್ಕ ಬಹುಮಾನ ಕಾರ್ಯಕ್ರಮ ವಿನ್ನರ್ ಆದ ಕೀರ್ತನ್ ಗೆ ಕಾನ್ಫಿಡೆಂಟ್ ಗ್ರೂಪ್ ಕಡೆಯಿಂದ 35 ಲಕ್ಷ ಮೌಲ್ಯದ 3 ಬಿ ಹೆಚ್ ಕೆ ಅಪಾರ್ಟ್ ಮೆಂಟ್ ಸಿಕ್ಕಿದೆ. ಇದರ ಜೊತೆಗೆ ಜೀ ಕನ್ನಡ ವಾಹಿನಿಯ ವಿನ್ನರ್ ಟ್ರೋಫಿ ಅವರ ಪಾಲಾಗಿದೆ. ಕ್ಲಾಸಿಕಲ್ ಹಾಡುಗಳನ್ನು ನೀರು ಕುಡಿದಷ್ಟು ಸುಲಭವಾಗಿ ಹಾಡುವ ಕೀರ್ತನ್ ಗೆದ್ದು ತೋರಿಸಿದ್ದಾರೆ.

ವೀಕ್ಷಕರ ತೀರ್ಪು ಜನರು ತಮ್ಮ ಮೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡುವ ಮೂಲಕ ವಿನ್ನರ್ ಅನ್ನು ಆಯ್ಕೆ ಮಾಡಿದ್ದಾರೆ. ಕೀರ್ತನ್ ಗೆ ಕರ್ನಾಟಕದ ಜನರ ಪ್ರೀತಿ ಸಿಕ್ಕಿದೆ. ಉಳಿದಂತೆ, ಎರಡನೇ ಸ್ಥಾನಕ್ಕೆ ಹನುಮಂತ ಹಾಗೂ ಮೂರನೇ ಸ್ಥಾನಕ್ಕೆ ಸಾಧ್ವನಿ ತೃಪ್ತಿ ಪಟ್ಟುಕೊಂಡಿದ್ದಾರೆ. ವೀಕ್ಷಕರ ತೀರ್ಪು ವಿನ್ನರ್ ಪಟ್ಟ ನೀಡಿದೆ.

ನೇರ ಪ್ರಸಾರ ಮಾಡಿದ ಜೀ ವಾಹಿನಿ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಕಾರ್ಯಕ್ರಮ ಬೆಂಗಳೂರಿನ ಕೊರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಅನುಶ್ರೀ ಕಾರ್ಯಕ್ರಮದ ನಿರೂಪಣೆ ಮಾಡಿದರು. ವಿಜಯ ಪ್ರಕಾಶ್, ಅರ್ಜುನ್ ಜನ್ಯ ರಾಜೇಶ್ ಕೃಷ್ಣನ್ ಹಾಗೂ ಮಹಾ ಗುರುಗಳಾದ ಹಂಸಲೇಖ ಅವರು ತೀರ್ಪುಗಾರರಾಗಿದ್ದರು. ಈ ಕಾರ್ಯಕ್ರಮವನ್ನು ಜೀ ವಾಹಿನಿ ನೇರ ಪ್ರಸಾರ ಮಾಡಿತ್ತು.