Recent Posts

Sunday, January 19, 2025
ರಾಜಕೀಯಸುದ್ದಿ

ಯಡಿಯೂರಪ್ಪ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು: ದಿನೇಶ್ ಗುಂಡೂರಾವ್ – ಕಹಳೆ ನ್ಯೂಸ್

ಮಂಗಳೂರು: ಲೋಕಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯದ ಸೀಟು ಹಂಚಿಕೆ ಮೂರ್ನಾಲ್ಕು ದಿನದಲ್ಲಿ ಅಂತಿಮವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಈ ಬಗ್ಗೆ ನಾಳೆ ಸಭೆ ಸೇರಲಾಗುವುದು. ರೇವಣ್ಣ, ವಿಶ್ವನಾಥ್, ಪರಮೇಶ್ವರ್ ಮತ್ತು ನಾನು ಸಭೆ ಸೇರಿ ಮೂರ್ನಾಲ್ಕು ದಿನದಲ್ಲಿ ಅಂತಿಮಗೊಳಿಸಲಾಗುವುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯಡಿಯೂರಪ್ಪ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು. ಶಾಸಕರನ್ನು ಖರೀದಿ ಮಾಡುವುದು ಬಹಿರಂಗವಾಗಿದೆ. ಧ್ವನಿ ತಮ್ಮದೇ ಎಂದು ಒಪ್ಪಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಷ್ಟೆಲ್ಲ ಮಾನಗೆಟ್ಟ ರಾಜಕಾರಣ ಮಾಡಿದ ಬಳಿಕ ಅವರು ಅಧ್ಯಕ್ಷರಾಗಿ ಇರಬೇಕಾ? ಅವರನ್ನು ರಾಷ್ಟ್ರೀಯ ನಾಯಕರು ಯಾಕೆ ವಜಾ ಮಾಡಿಲ್ಲ ಎಂದು ಪ್ರಶ್ನಿಸಿದರು.