Sunday, January 19, 2025
ಸುದ್ದಿ

ಭಯೋತ್ಪಾದನೆ ಸಮಸ್ಯೆಯನ್ನು ಪೂರ್ಣವಾಗಿ ನಿವಾರಿಸಲು ಯುದ್ಧ ನಡೆಯಲೇಬೇಕಿದೆ: ರಾಮದೇವ್‌ – ಕಹಳೆ ನ್ಯೂಸ್

ಹರಿದ್ವಾರ: ‘ನಮ್ಮ ಜವಾನರನ್ನು ನಾವು ಕಳೆದುಕೊಳ್ಳುವ ಮಾತೇ ಇಲ್ಲ; ಭಯೋತ್ಪಾದನೆ ಸಮಸ್ಯೆಯನ್ನು ಪೂರ್ಣವಾಗಿ ನಿವಾರಿಸಲು ಯುದ್ಧ ನಡೆಯಲೇಬೇಕಿದೆ ‘ ಎಂದು ಬಾಬಾ ರಾಮದೇವ್‌ ಹೇಳಿದರು.

ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಭಯೋತ್ಪಾದಕನೋರ್ವ ನಡೆಸಿದ ಆತ್ಮಾಹುತಿ ಬಾಂಬ್‌ ದಾಳಿಗೆ ಕನಿಷ್ಠ 40 ಸಿಆರ್‌ಪಿಎಫ್ ಯೋಧರು ಬಲಿಯಾಗಿರುವುದಕ್ಕೆ ತೀವ್ರ ಶೋಕ, ಆಘಾತ ವ್ಯಕ್ತಪಡಿಸಿರುವ ಬಾಬಾ ರಾಮದೇವ್‌, ‘ಯುದ್ಧದ ಹೊರತು ಯಾರೂ ಪರಿಶುದ್ಧರಾಗಲಾರರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಕಿಸ್ಥಾನ ಜನತೆಯ ವಿರುದ್ಧ ನಮಗೆ ಯಾವುದೇ ದೂರುಗಳಿಲ್ಲ; ಆದರೆ ಪಾಕಿಸ್ಥಾನದಲ್ಲಿ ಅಧಿಕಾರದಲ್ಲಿರುವವರಿಗೆ ಯುದ್ಧ ಬಿಟ್ಟರೆ ಬೇರೆ ಭಾಷೆ ಅರ್ಥವಾಗುವುದಿಲ್ಲ. ಕಳೆದ 70 ವರ್ಷಗಳಿಂದಲೂ ನಾವು ಅವರೊಂದಿಗೆ ಮಾತನಾಡುತ್ತಲೇ ಬಂದಿದ್ದೇವೆ. ಆದರೆ ಅದೇ ವೇಳೆ ನಾವು ನಮ್ಮ 50,000 ಜನರನ್ನು ಕಳೆದುಕೊಂಡಿದ್ದೇವೆ’ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಾವು ಪಾಕಿಸ್ಥಾನದ ವಿರುದ್ಧ ಯುದ್ಧ ಮಾಡಲೇಬೇಕು, ಏಕೆಂದರೆ ಇಸ್ಲಾಮಾಬಾದ್‌ ಗೆ ಯುದ್ಧ ಬಿಟ್ಟರೆ ಬೇರೆ ಯಾವುದೇ ಭಾಷೆ ಅರ್ಥವಾಗುವುದಿಲ್ಲ’ ಎಂದು ಯೋಗ ಗುರು ಬಾಬಾ ರಾಮದೇವ್‌ ಹೇಳಿದ್ದಾರೆ.