Sunday, January 19, 2025
ಸುದ್ದಿ

ಕೃಷಿ ಯಂತ್ರಮೇಳದಲ್ಲಿ ರೇಡಿಯೋ ಪಾಂಚಜನ್ಯ ಪ್ರಾಯೋಜಿತ ಸಾಂಸ್ಕೃತಿಕ ವೈಭವ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಕ್ಯಾಂಪಸ್‌ನಲ್ಲಿ ನಡೆದ ಕರಷಿ ಯಂತ್ರಮೇಳದ ಎರಡನೆಯ ದಿನವಾದ ಭಾನುವಾರ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಪಾಂಚಜನ್ಯ ೯೦.೮ ಎಫ್.ಎಂ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿವೇಕಾನಂದ ಇಂಜಿಯನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಬಡಗಿನ ಪ್ರಸಿದ್ಧ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ ಹಾಗೂ ತಂಡದವರಿಂದ ಯಕ್ಷಗಾನ ವೈಭವ ಹಾಗೂ ಪುತ್ತೂರಿನ ಗಾನಸರಸ್ವತಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆದವು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅದಾಗಲೇ ಯುವ ಮನಸ್ಸನ್ನು ಗೆದ್ದ ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ ತಂಡದ ಯಕ್ಷ ಗಾನ ವೈವಿಧ್ಯವು ವಿನೂತನವಾಗಿ ಮೂಡಿಬಂತು. ಗಜಮುಖನನ್ನು ಸ್ಮರಿಸುವ ಹಾಡಿನಿಂದಲೇ ಜನರನ್ನು ತನ್ನೆಡೆಗೆ ಸೆಳೆದ ಜನ್ಸಾಲೆ ಭಾಗವತರು, ಶ್ರೀರಾಮ ಪಟ್ಟಾಭೀಷೇಕ ನೆನಪಿಸುವಂತಹ ಪನ್ನೀರ ರಾಮನಿಗೆ ಹಾಡನ್ನು ಪ್ರಸ್ತುತ್ತ ಪಡಿಸಿದರು.

ಮುಂದೆ ಕಂಡಳಾಗ ಮಾರಜನಕನ ಎಂಬ ಹಾಡನ್ನು ಪ್ರಸ್ತುತ ಪಡಿಸಿದರು. ಆ ಸಂದರ್ಭದಲ್ಲಿನ ಹಿಮ್ಮೇಳದ ವೈಭವ ಜನಮನ ಸೂರೆಗೊಂಡಿತು. ಹಾಗೆಯೇ ರತ್ನಾವತಿ ಕಲ್ಯಾಣ ¨ಪ್ರಸಂಗದ ಪೇಳುವರೆ ಸಖಿ ಎಂಬ ಹಾಡಿಗೆ ದನಿ ಬೆರೆಸಿದರು. ಬಡಗಿನ ಸಾರ್ವಕಾಲಿಕ ಹಿಟ್ ಹಾಡು ಮೇಘ ಮಾಲೆ ಗಿರಿಯ ಮೇಲೆ ಎಂಬ ಹಾಡಿಗೆ ದನಿಗೂಡಿಸಿದರು ಮತ್ತು ಭಕ್ತಿ ರಸವಾದ ಸ್ಮರಿಸಯ್ಯ ರಾಮ ಮಂತ್ರವ ಹಾಡು ನೆರೆದವರನ್ನು ಭಕ್ತಿಪರವಶರನ್ನಾಗಿಸಿತು. ನಂತರ ಬೀಷ್ಮ ವಿಜಯ ಪ್ರಸಂಗದ ಪರಮ ಖುಷಿ ಮಂಡಲದ ಹಾಡಿಗೆ ತಮ್ಮ ಸ್ವರ ಕಂಠದ ಮೂಲಕ ಪ್ರೇಕ್ಷಕರ ಚಿತ್ತವನ್ನು ಸೆಳೆಯುವಲ್ಲಿ ಯಶಸ್ವಿಯಾದರು.

ಜನ್ಸಾಲೆಯವರು ಭಾಗವತ ಶ್ರೇಷ್ಟ ಕಾಳಿಂಗ ನಾವಡರ ಹಾದಿಯನ್ನೇ ಅನುಸರಿಸಿ ಬಂದವರಾಗಿರುವುದರಿಂದ ಹಾಗೂ ಕಾಳಿಂಗ ಣಾವಡರಂತೆಯೇ ಹಾಡಲೂ ಗೊತ್ತಿರುವವರಾಗಿರುವುದರಿಂದ ಕಾಳಿಂಗ ನಾವಡರ ದಾಟಿಯಲ್ಲೇ ಃಆಡಬೇಕೆಂಬ ಕೋರಿಕೆಯೂ ಮೂಡಿಬಂತು. ಆಗ ಕಾಳಿಂಗ ನಾವುಡರು ಹಾಡಿದ ‘ಏತಕಿಂತ ಬುದ್ಧಿ ಬಂತೋ’ ಎಂಬ ಹಾಡನ್ನು ಪ್ರಸ್ತುತ ಪಡಿಸಿದರು. ಹಾಗೆಯೇ ತಮ್ಮ ಧ್ವನಿ ಶೈಲಿಯಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಮುಂದಿಟ್ಟರು.

ಕೊನೆಯದಾಗಿ ಕವಿ ಸುಬ್ರಾಯ ಚೊಕ್ಕಾಡಿಯವರ ರಚನೆಯಲ್ಲಿ ಮೂಡಿದ ಮುನಿಸು ತರಹವೇ ಎಂಬ ಹಾಡಿಗೆ ಸ್ವರಭರಿತವಾಗಿ ಹಾಡುವುದರ ಮೂಲಕ ಎಲ್ಲರ ಗಮನವನ್ನು ಸೆಳೆದರು. ಮತ್ತು ಮಂಗಳಗೀತೆಯನ್ನು ಹಾಡುವುದರ ಮೂಲಕ ಕರ‍್ಯಕ್ರಮಕ್ಕೆ ತೆರೆ ಎಳೆದರು. ಇಡಿಯ ಕಾರ್ಯಕ್ರಮದಲ್ಲಿ ಹಿಮ್ಮೇಳದವರ ಸತ್ವವೂ ಅನಾವರಣಗೊಂಡಿತು. ಚೆಂಡೆವಾದಕರಾಗಿ ಶಿವಾನಮದ ಕೋಟ ಹಾಗೂ ಮದ್ದಳೆಯಲ್ಲಿ ಸಹಕರಿಸಿದ ಸುನಿಲ್ ಎಸ್ ಭಂಡಾರಿ ಅವರಿಗೂ ನೆರೆದ ಜನ ಭಾರೀ ಕರತಾಡನದೊಂದಿಗೆ ಮೆಚ್ಚುಗೆ ಸೂಚಿಸಿದರು.

ಇಡಿಯ ಯಕ್ಷಗಾನ ವೈಭವವನ್ನು ಹಿರಿಯ ಕಲಾವಿದ ನಾ.ಕಾರಂತ ಪೆರಾಜೆವರು ಅರ್ಥಪೂರ್ಣವಾಗಿ ನಿರ್ವಹಿಸಿದರು. ಪ್ರತಿಯೊಂದು ಭಾಗವತಿಕೆಗೂ ಮುನ್ನ ಒಂದೆರಡು ಪೂರಕ ಸಾಲನ್ನು ಕಾರಂತರು ಹೇಳಿದ್ದು ಜನರಿಗೆ ಕಾರ್ಯಕ್ರಮ ಮತ್ತಷ್ಟು ಇಷ್ಟವಾಗುವಂತೆ ಮಾಡಿತು.

ಸಂಗೀತ ಕಾರ್ಯಕ್ರಮ: ಜನ್ಸಾಲೆಯವರ ಯಕ್ಷಗಾನ ವೈಭವಕ್ಕೂ ಪೂರ್ವದಲ್ಲಿ ಪುತ್ತೂರಿನ ಗಾನಸರಸ್ವತಿ ಸಂಗೀತ ಶಾಲೆಯ ವಿದ್ಯಾರ್ಥಿಗಳು ಸಂಗೀತ ರಸದೌತಣವನ್ನು ಉಣಬಡಿಸಿದರು. ಗುರು ವೀಣಾ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ಮೊದಲಿಗೆ ವಿಘ್ನ ವಿನಾಶಕನಾದ ಗಜಮುಖನನ್ನು ಸ್ಮರಿಸುವ ಗಜಮುಖನೇ ಹೇ ರಂಭ ಹಾಡಿಗೆ ರಾಗ ಹಾಕಿದರು.

ಎರಡನೇ ಹಾಡಾಗಿ ತಮಿಳು ರಚನೆಕಾರ ಅಗತ್ಯರವರ ರಚನೆಯಲ್ಲಿರುವ ಪ್ರಭೋ ಗಣಪತಿ ಹಾಡನ್ನು ನೆರೆದಿದ್ದ ಸಂಗೀತ ರಸಿಕರಿಗೆ ಉಣ ಬಡಿಸಿದರು. ಮೈಸೂರಿನ ಆಸ್ಥಾನ ಚಾಮರಾಜೇಂದ್ರ ಒಡೆಯರ ಆಳ್ವಿಕೆ ಕಾಲದ ಸಂಗೀತ ವಿದ್ವಾಂಸರಾದ ಬಸವಪ್ಪ ಶಾಸ್ತ್ರಿಗಳಿಂದ ರಚಿತವಾದ ಯಮನ್ ರಾಗ, ರೂಪಕ ತಾಳದ ಕಾಯೋ ಸ್ತ್ರೀ ಗೌರಿ ಎಂಬ ಹಾಡು ವಿದ್ಯಾರ್ಥಿಗಳ ಕಂಠ ಸಿರಿಯಲ್ಲಿ ಮೂಡಿ ಬಂತು.

ಕೆ ಎಸ್ ನರಸಿಂಹ ಸ್ವಾಮಿಯವರ ರಚನೆಯ ತುಂಗ ತಿಂಗಳಿನ ಮಲ್ಲಿಗೆ ಹಂಬಿನ ಹಾಡಿಗೆ ರಾಗ ಹಾಕಿದರು. ರವೀಂದ್ರ ರಾಕೂಠ್ ರಚನೆಯ ಗೀತೆಯಾದ ಹೇ ಭುವನ ಮನೋಮೋಹಿನಿ ಮೋಹನ ರಾಗ ಮತ್ತು ಏಕ ತಾಳದಲ್ಲಿ ಮೂಡಿಬಂತು. ಆನಂದ ಬೈರವಿ ರಾಗ, ಆದಿ ತಾಳದ ಹಾಢು ವಿದ್ಯಾರ್ಥಿಗಳ ಕಂಠ ಸಿರಿಯಲ್ಲಿ ಮೂಡಿಬಂತು. ಶಿಶುನಾಳರ ರಚನೆಯ ಸವಾಲೊಂದು ನಿನ್ನ ಮೇಲೆ ಎಂಬ ಹಾಡು ನೆರೆದಿದ್ದ ಜನರ ಚಿತ್ತವನ್ನು ಸೆಳೆಯಿತು.

ಪುರಂದಾಸರ ರಚನೆಯ ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ, ದ.ರಾ ಬೇಂದ್ರೆಯವರ ರಚನೆ ಗಮ ಗಮ ಆಡಿಸ್ತಾವ ಮಲ್ಲಿಗೆ ಪೇಕ್ಷಕರ ಮನಸ್ಸನ್ನು ಸೂರೆಗೊಳ್ಳುವಂತೆ ಮಾಡಿತು. ಪೂತಿ ನರಸಿಂಹ ಆಚಾರ್ಯರ ನಾಟಕದ ಎನಿತು ದೂರಕೆ ರಸವತ್ತಾಗಿ ಹಾಡಿದರೆ, ಮತ್ತೊದೆಡೆ ದರಾ ಬೇಂದ್ರೆಯವರ ಶ್ರಾವಣ ಬಂತು ಹಾಡಿಗೆ ನಾಡಿಗೆ ಎಂಬ ಹಾಡುಗಳು ನೆರೆದಿದ್ದವರ ಚಿತ್ತವನ್ನು ಸೆಳೆಯಿತು.

ಅಕ್ಕನ ರಚನೆಯ ರೂಪಕ ತಾಳದ ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ, ಮತ್ತು ರೇವತಿ ರಾಗದ ಜನನ ಜನನಿ ಹಾಡು ಎಲ್ಲರ ಮನಸ್ಸಿಗೆ ಮುದವನ್ನು ನೀಡಿತು. ಭಾರತಾಂಬೆಯನ್ನು ಪುನಃ ನಮಸ್ಕರಿಸುವ ಗೀತೆಯು ನಮೋ ನಮೋ ಭಾರತಾಂಬೆ ಎಂಬ ಹಾಡು ಕೊನೆಯಾದಾಗಿ ಮೂಡಿ ಬಂತು.

ಈ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಾದ ಶ್ರೇಯಸ್, ಅನನ್ಯ ಪಿ.ಎನ್, ಅಶ್ವಿನಿ, ಶ್ರೀ ಲಕ್ಷಿ್ಮೀ ಎನ್ ಅಂಕಿತ ಎಸ್, ಸನ್ನಿಧಿ, ನಿಷ್ಕಲ ಬಡಕಿಲ, ಸಿಂಚನ ಎಸ್ ಭಟ್, ತನ್ಮಯಿ, ಶ್ರೀರಾಮ್ ಭಟ್ ಸೊಗಸಾದ ಸಂಗೀತಸುಧೆಯನ್ನು ಉಣ ಬಡಿಸಿದರು. ರಾಘವೇಂದ್ರ ಎಚ್. ಎಮ್ ಸಂಗೀತ ಕರ‍್ಯಕ್ರಮ ನಿರೂಪಿಸಿದರು.