ಮಂಗಳೂರು: ಆಸ್ತಿ ಮಾರುವುದಕ್ಕೆ ಮತ್ತು ಆಸ್ತಿ ಪಡೆದುಕೊಳ್ಳುವುದಕ್ಕೆ ಪಾಪರ್ಟಿ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಆದರೆ 1 ಲಕ್ಷ 20 ಸಾವಿರ ಪ್ರಾಪರ್ಟಿದಾರರಲ್ಲಿ ಸುಮಾರು 20 ಸಾವಿರ ಪ್ರಾಪರ್ಟಿದಾರರಿಗೆ ಈಗಾಗಲೇ ಪ್ರಾಪರ್ಟಿ ಕಾರ್ಡ್ ವಿತರಣೆಯಾಗಿದೆ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.
ಪ್ರಾಪರ್ಟಿ ಕಾರ್ಡ್ ಪಡೆಯಬೇಕಾದರೆ ಕನಿಷ್ಠ ಪಕ್ಷ 15-20 ದಿನ ಕಾಯಬೇಕು. ಅಥವಾ ಯಾವುದಾದರೂ ದಾಖಲೆಗಳು ಸರಿ ಇಲ್ಲದಿದ್ದರೂ ಪ್ರಾಪರ್ಟಿ ಕಾರ್ಡ್ ಪಡೆಯಲು ತಡವಾಗಬಹುದು. ಹಾಗಾಗಿ ಸ್ವಲ್ಪ ಸಮಸ್ಯೆಗಳು ಉದ್ಭವವಾಗಿದೆ. ಪ್ರಾಪರ್ಟಿ ಕಾರ್ಡ್‍ಬೇಕು. ಒಳ್ಳೆಯ ಕ್ರಮ, ಇದರಿಂದ ಎಲ್ಲರಿಗೂ ಉಪಯೋಗ ಇದೆ ಎಂಬುವುದನ್ನು ಎಲ್ಲರೂ ಒಪ್ಪುತ್ತಾರೆ.
ನಮ್ಮ ಸಾಫ್ಟ್‍ವೇರ್ ಹಾಗೂ ಸರ್ವರ್‍ಗಳಲ್ಲಿ ಸ್ವಲ್ಪ ಮಟ್ಟಿಗೆ ತೊಂದರೆಯಾಗಿದ್ದು, ಅ ಕಾರಣಕ್ಕಾಗಿ ಪ್ರಾಪರ್ಟಿ ಕಾರ್ಡ್ ಕಡ್ಡಾಯದ ದಿನಾಂಕವನ್ನು ಮುಂದೂಡಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.
ಈ ಕಾರಣಕ್ಕಾಗಿ ಹೆಚ್ಚು ಪ್ರಾಪರ್ಟಿ ಕಾರ್ಡ್ ನೋಂದಣಿ ಕೇಂದ್ರಗಳನ್ನು ತೆರೆಯಲಿದ್ದೇವೆ. ಸರ್ವೇಯರ್‍ಗಳನ್ನು ಹಾಕಲಿದ್ದೇವೆ. ಒಂದು ಸಲ ಪಾಪರ್ಟಿ ಕಾರ್ಡ್ ಮಾಡಿದರೆ ಯಾರಿಗೂ ತಿದ್ದಲು ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ದಾಖಲೆಗಳನ್ನು ಸರಿಯಾಗಿಡಲು ಸಾಧ್ಯ.
ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಈ ಕೆಲಸವನ್ನು ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ. ಹಾಗಾಗಿ ಮೂಡುಬಿದಿರೆ ಹಾಗೂ ಮಂಗಳೂರಿನ ತಹಸೀಲ್ದಾರರ ಕಚೇರಿಯಲ್ಲಿ ಪ್ರಾಪರ್ಟಿ ಕಾರ್ಡ್ ಮಾಡುವಾಗಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಅಹವಾಲನ್ನು ನಾನು ಪಡೆದುಕೊಂಡಿದ್ದೇನೆ ಎಂದು ಅವರು ತಿಳಿಸಿದರು.