Recent Posts

Monday, January 20, 2025
ರಾಜಕೀಯಸುದ್ದಿ

ಪ್ರಧಾನಿಯಂತೆ ಸುಳ್ಳು ಯೋಜನೆ ಘೋಷಣೆ ಮಾಡದೆ, ಕೆಲಸ ಮಾಡಿ ತೋರಿಸುತ್ತೇವೆ: ಹೆಚ್.ಡಿ.ಕೆ – ಕಹಳೆ ನ್ಯೂಸ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ತರಹ ಸುಳ್ಳು ಯೋಜನೆ ಘೋಷಣೆ ಮಾಡದೆ, ಕೆಲಸ ಮಾಡಿ ತೋರಿಸುತ್ತೇವೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ನಗರ 2035 ರ ವೇಳೆಗೆ ಏಷ್ಯಾದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಜಿಡಿಪಿ ನೀಡುವ ನಗರವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನಿ ನರೇಂದ್ರ ಮೋದಿ ಅವರ ತರಹ ಹುಸಿ ಆಶ್ವಾಸನೆಗಳನ್ನು ನೀಡುವುದಿಲ್ಲ. ನಮ್ಮ ಮೈತ್ರಿ ಸರ್ಕಾರ ಘೋಷಿತ ಯೋಜನೆಗಳನ್ನು ಜಾರಿಗೊಳಿಸಿ ಸಾಧಿಸಿ ತೋರಿಸಲಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಂತಹಂತವಾಗಿ ಬೆಳೆಯುತ್ತಿರುವ ನಗರದ ಅಭಿವೃದ್ಧಿಯ ಬಗ್ಗೆ ಜನಸಾಮಾನ್ಯರಲ್ಲಿ ಕಳೆದ 15 ವರ್ಷಗಳಿಂದ ಅಸಮಾಧಾನವಿತ್ತು. ಅದನ್ನು 9 ತಿಂಗಳಲ್ಲಿ ಶಮನಗೊಳಿಸಿದ್ದೇವೆ ಎಂದರು.