Recent Posts

Monday, January 20, 2025
ಸಿನಿಮಾಸುದ್ದಿ

ಪಂಚತಂತ್ರದಲ್ಲಿ ಏನು ಹೇಳಲು ಹೊರಟಿದ್ದಾರೆ ಭಟ್ರು…? – ಕಹಳೆ ನ್ಯೂಸ್

“ಪಂಚತಂತ್ರ” ಸಿನಿಮಾದ ಹಾಡುಗಳು ಎಲ್ಲರಿಗೆ ಇಷ್ಟ ಆಗಿವೆ. ‘ಶೃಂಗಾರ ಹೊಂಗೆಮರ..’ ಎಂದು ಹಾಡು ಬರೆದಿದ್ದ ಭಟ್ಟರು ಈಗ ಪಂಚತಂತ್ರದ ದರ್ಶನ ಮಾಡಿಸಲು ಸಿದ್ಧರಾಗಿದ್ದಾರೆ.

‘ಪಂಚತಂತ್ರ’ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಸಿನಿಮಾ ಮಾರ್ಚ್ 29 ರಂದು ಗ್ರಾಂಡ್ ರಿಲೀಸ್ ಆಗುತ್ತಿದೆ. ಇಷ್ಟು ದಿನದಿಂದ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಅಂತೂ ಬಿಡುಗಡೆಯ ದಿನಾಂಕ ಕೇಳಿ ಸಂತಸವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆ.ಆರ್.ಜಿ ಸ್ಟುಡಿಯೋ ಮೂಲಕ ಸಿನಿಮಾ ವಿತರಣೆ ಆಗುತ್ತಿದೆ. ಅಂದಹಾಗೆ, ‘ಪಂಚತಂತ್ರ’ ಸಿನಿಮಾ ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನದ ವಿಶೇಷವಾಗಿ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದ್ದು, ಹೀಗಾಗಿ ಮಾರ್ಚ್ ಕೊನೆಯಲ್ಲಿ ಬಿಡುಗಡೆಯಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಡುಗಡೆಯ ಸನಿಹದಲ್ಲಿ ‘ಪಂಚತಂತ್ರ’ವನ್ನು ವಿವರಿಸಿದ ಭಟ್ಟರು ಸ್ನೇಹ, ಸಂಬಂಧ, ಸ್ಪರ್ಧೆ, ಸಂಗೀತ ಹಾಗೂ ಮನರಂಜನೆ ಎಂದು ಹೇಳಿದ್ದಾರೆ.

ಈ ಎಲ್ಲ ಅಂಶಗಳು ಸಿನಿಮಾದಲ್ಲಿ ಇವೆಯಂತೆ. ಇನ್ನು ವಿಹಾನ್ ಗೌಡ ಸಿನಿಮಾದ ನಾಯಕನಾಗಿದ್ದು, ಸೊನಾಲ್ ಹಾಗೂ ಅಕ್ಷರ ಗೌಡ ನಾಯಕಿಯರಾಗಿದ್ದಾರೆ. ವಿ ಹರಿಕೃಷ್ಣ ಸಂಗೀತ ಈಗಾಗಲೇ ಹಿಟ್ ಆಗಿದೆ.