Friday, November 15, 2024
ಸುದ್ದಿ

ಭಯೋತ್ಪಾದನ ಕೇಂದ್ರವಾಗಿರುವ ಪಾಕಿಸ್ತಾನವನ್ನು ನಿರ್ನಾಮ ಮಾಡಿ: ರಾಷ್ಟ್ರಪ್ರೇಮಿಗಳ ಆಗ್ರಹ – ಕಹಳೆ ನ್ಯೂಸ್

‘ಜೈಶ-ಎ-ಮೊಹಮ್ಮದ’ ಈ ಉಗ್ರ ಸಂಘಟನೆಯು ಫೆಬ್ರವರಿ 14 ರಂದು ಜಮ್ಮು-ಕಾಶ್ಮೀರದ ಪುಲವಾಮಾ ಜಿಲ್ಲೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸೈನಿಕರ ಮೇಲೆ ಹೇಡಿಯಂತೆ ದಾಳಿ ನಡೆಸಿತು.

ಈ ಮೊದಲು ಉರಿಯಲ್ಲಿ ಭಯೋತ್ಪಾದಕರು ಮಾಡಿದ ದಾಳಿಯ ನಂತರ ಭಾರತವು ಪಾಕಿಸ್ತಾನಕ್ಕೆ ಪಾಠ ಕಲಿಸಲು ಸಪ್ಟೆಂಬರ್ 2016 ರಲ್ಲಿ ‘ಸರ್ಜಿಕಲ್ ಸ್ಟ್ರೈಕ್’ ಮಾಡಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಯನ್ನು ಧ್ವಂಸ ಮಾಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅನಂತರವೂ ಪಾಕಿಸ್ತಾನದ ವರ್ತನೆಯಲ್ಲಿ ಯಾವುದೇ ಬದಲಾವಣೆಯಾಗದಿದ್ದು ಸತತ ಉಗ್ರವಾದಿಗಳ ಮಾಧ್ಯಮದಿಂದ ಸೈನಿಕರನ್ನು ಬಲಿ ತೆಗೆದುಕೊಳ್ಳುತ್ತಿದೆ. ಉಗ್ರರು ಮತ್ತು ಪಾಕಿಸ್ತಾನದ ಸೈನಿಕರು ಭಾರತೀಯ ಸೈನಿಕರ ಹತ್ಯೆ ಮಾಡುವುದು, ಇದು ಪಾಕಿಸ್ತಾನದ ಅಘೋಷಿತ ಯುದ್ಧದ ಒಂದು ಭಾಗವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ರೀತಿ ದೇಶದ ಸಾರ್ವಭೌಮತೆಗೆ ಸಾವಾಲೆಸಗುವ ಮತ್ತು ಜಗತ್ತಿನಾದ್ಯಂತ ದೇಶದ ಅಪಹಾಸ್ಯವನ್ನು ಮಾಡುವ ಪಾಕಿಸ್ತಾನದ ಪ್ರಯತ್ನವನ್ನು ಭಾರತೀಯ ರಾಜಕಾರಣಿಗಳು ತಕ್ಷಣವೇ ಹೊಡೆದುರುಳಿಸುವುದು ಆವಶ್ಯಕವಾಗಿದೆ.

ಭಾರತೀಯ ರಾಜಕಾರಣಿಗಳು ಇನ್ನೆಷ್ಟು ಸೈನಿಕರು ಹುತಾತ್ಮರಾದ ಮೇಲೆ ಎಚ್ಚರಗೊಳ್ಳುವರು? ಕೇವಲ ರಾಜಕೀಯ ನಿರ್ಣಯದ ಅಭಾವದಿಂದಾಗಿ ಸೈನಿಕರು ಶತ್ರುರಾಷ್ಟ್ರದಿಂದ ಬಲಿಯಾಗುತ್ತಿದ್ದರೆ ಮುಂಬರುವ ಕಾಲದಲ್ಲಿ ಸೈನಿಕರೊಂದಿಗೆ ದೇಶಾದ್ಯಂತ ಅಸ್ಥಿರ ವಾತಾವರಣ ನಿರ್ಮಾಣವಾಗಲು ಸಮಯಬೇಕಾಗುವುದಿಲ್ಲ.

ಆದ್ದರಿಂದ ಕೇಂದ್ರ ಸರಕಾರವು ಜನರಭಾವನೆಯನ್ನು ಗಮನದಲ್ಲಿಟ್ಟುಕೊಂಡು ಭಯೋತ್ಪಾದಕರ ನಿರ್ಮಿತಿಯ ಕೇಂದ್ರವಾದ ಪಾಕ್ ವಿರುದ್ಧ ಕೂಡಲೇ ಕ್ರಮವನ್ನು ಕೈಗೊಂಡು ಅದನ್ನು ಸರ್ವನಾಶ ಮಾಡಬೇಕು, ಅದೇರೀತಿ ಕಾಶ್ಮೀರದಲ್ಲಿಯ ಪ್ರತ್ಯೇಕವಾದಿಗಳಿಗೆ ನೀಡಿದ ರಕ್ಷಣೆಯನ್ನು ಹಿಂಪಡೆದು ಅವರನ್ನು ಇತರ ರಾಜ್ಯಗಳಲ್ಲಿಯ ಸೆರೆಮನೆಯಲ್ಲಿ ಕೂಡಿಹಾಕಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಆನಂದ ಗೌಡ ಇವರು ಆಗ್ರಹಿಸಿದ್ದಾರೆ.

ಪುಲವಾಮಾದಲ್ಲಿ ಆದ ದಾಳಿಯನ್ನು ಖಂಡಿಸಲು ವಿವಿಧ ಹಿಂದುತ್ವನಿಷ್ಠ ಸಂಘಟನೆಯೊಂದಿಗೆ ಅನೇಕ ರಾಷ್ಟ್ರಪ್ರೇಮಿ ನಾಗರಿಕರು ಪ್ರತಿಭಟನೆಯನ್ನು ಮಾಡಿದರು. ಈ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಅಮೇರಿಕಾದ ನಾಗರಿಕರ ಮೇಲೆ ದಾಳಿಯಾಗುವ ಸಾಧ್ಯತೆ ಬಗ್ಗೆ ಕೇವಲ ಸೂಚನೆ ಸಿಕ್ಕಿದರೂ ಅಮೇರಿಕಾವು 20 ಮುಸಲ್ಮಾನ ದೇಶದಲ್ಲಿಯ ತನ್ನ ರಾಯಭಾರಿ ಕಛೇರಿಗಳನ್ನು ಮುಚ್ಚಿತು.

ಇದರಿಂದ ಇದರ ಅಭ್ಯಾಸವನ್ನು ಮಾಡಿ ಭಾರತವು ಈಗ ವಿವಿಧ ಹಂತಗಳಲ್ಲಿ ಪಾಕಿಸ್ತಾನಕ್ಕೆ ಅದರ ಸ್ಥಾನವನ್ನು ತೋರಿಸಬೇಕಾಗಿದೆ. ಭಾರತೀಯ ಸೈನಿಕರ ಬಲಿಯನ್ನು ಪಡೆಯುವ ಪಾಕಿಸ್ತಾನದೊಂದಿಗೆ ಭಾರತವು ಈಗ ಯಾವುದೇ ರೀತಿಯ ಚರ್ಚೆಯನ್ನು ಮಾಡದೇ ನೇರ ಸೇನಾ ಕಾರ್ಯಾಚರಣೆಯನ್ನು ಮಾಡಿ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು, ಎಂಬ ಬೇಡಿಕೆಯನ್ನು ಈ ಪ್ರತಿಭಟನೆಯಲ್ಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ. ತಿಮ್ಮಪ್ಪ ಗೌಡ ಬೆಳಾಲು ಧರ್ಮರಕ್ಷಾ ಸಮಿತಿ ಕಾನರ್ಪದ ಜಯರಾಜ್ ಸಾಲಿಯನ್ ವಿಶ್ವ ಹಿಂದೂ ಪರಿಷತ್ ನ ಬೆಳ್ತಂಗಡಿಯ ನಗರ ಪ್ರಮುಖರಾದ ಪ್ರಶಾಂತ್ ರಾಮಗಿರಿ ಮತ್ತು ವಿಗ್ನೇಶ್ ಆಚಾರ್ಯ ರಾಷ್ಟೀಯ  ಹಿಂದೂ ಜಾಗರಣ ವೇದಿಕೆ ಇಂದಬೆಟ್ಟುವಿನ ನಿತೇಶ ಕಡಿತ್ಯಾರ್
ಶಾಂತಿನಗರ ಬಾಲ ಭಾರತಿಯ  ಹರೀಶ್ ಕುಮಾರ ಪುದುವೆಟ್ಟು ಇವರು ಉಪಸ್ಥಿತರಿದ್ದರು. ಜಯರಾಜ್ ಸಾಲಿಯನ್ ಇವರು ನಿರೂಪಣೆ ಮಾಡಿದರು.