Friday, November 15, 2024
ಸುದ್ದಿ

ಸ್ಪರ್ಧೆಗಳು ವ್ಯಕ್ತಿಯನ್ನು ಬೆಳೆಸುತ್ತವೆ: ಶ್ರೀನಿವಾಸ್ ಪೈ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಗಳು ಬಾಲ್ಯದಿಂದಲೇ ಸ್ಪರ್ಧಾತ್ಮಕ ಗುಣವನ್ನು ಮೈಗೂಡಿಸಿಕೊಂಡಿರಬೇಕು. ಅದಕ್ಕಾಗಿ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಸ್ಪರ್ಧೆಗಳು ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಪೈ ಹೇಳಿದರು.

ಅವರು ಕಾಲೇಜಿನ ತೃತೀಯ ವಿಜ್ಞಾನ ಪದವಿ ವಿಭಾಗದ ವಿದ್ಯಾರ್ಥಿಗಳು ತಮ್ಮ ಕಿರಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ‘ಸ್ಪೆಕ್ಟ್ರಾ ಟ್ಯಾಲೆಂಟ್ ಹಂಟ್’ ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಒದಗಿ ಬರುವ ವೇದಿಕೆಗಳನ್ನು ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳುವುದಕ್ಕಾಗಿ ಬಳಸಿಕೊಳ್ಳಬೇಕು. ಇದು ಜ್ಞಾನ ಭಂಡಾರವನ್ನು ವೃದ್ಧಿಸಿಕೊಳ್ಳಲು ಸಹಕಾರಿ. ಅಂಕ ಗಳಿಕೆಯೊಂದೆ ಕಲಿಕೆಯ ಗುರಿಯಾಗಬಾರದು. ಇತರ ಸೃಜನಶೀಲ ಕೆಲಸಗಳತ್ತವೂ ತಮ್ಮ ಆಸಕ್ತಿಯನ್ನು ವಿಸ್ತರಿಸಿಕೊಂಡಾಗ ಬೌದ್ಧಿಕ ವಿಸ್ತರಣೆ ಸಾಧ್ಯ. ನಡೆದು ಬಂದ ಹಾದಿಯನ್ನು, ಮಾರ್ಗದರ್ಶನ ಮಾಡಿದ ಹಿರಿಯರನ್ನು ಸದಾ ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಬಾಕರ್ ಮಾತನಾಡಿ, ವಿಜ್ಞಾನದ ವಿದ್ಯಾರ್ಥಿಗಳೆಂದ ಕೂಡಲೇ ನೆನಪಾಗುವುದು ಪ್ರಯೋಗಾಲಯ, ನಿರಂತರ ಓದುವಿಕೆ. ಆದರೆ ಅವರಲ್ಲಿಯೂ ಹಾಸ್ಯ ಮನೋಭಾವ, ಸೃಜನಶೀಲತೆ, ಸ್ಪಧಾತ್ಮಕ ಗುಣಗಳಿವೆ. ಅಂತಹ ಗುಣಗಳನ್ನು ಗುರುತಿಸಲು ಕಾಲೇಜು ಮಟ್ಟದ ಸ್ಪರ್ಧಾ ವೇದಿಕೆಗಳು ತುಂಬಾ ಉಪಕಾರಿ. ಸ್ಪರ್ಧೇ ಎಂದರೇ ಕೇವಲ ಸೊಲು ಗೆಲುವಲ್ಲ. ಅದರಲ್ಲಿ ಮೌಲ್ಯಯುತ ಕಲಿಕೆಗೆ ಸುಗುವ ಅವಕಾಶ ಅಪಾರ. ತಮ್ಮನ್ನು ಇತರರೊಂದಿಗೆ ಹೋಲಿಸದೆ ಸ್ಪರ್ಧೇಗಳಲ್ಲಿ ಪಾಲ್ಗೊಳ್ಳುವುದು ಪ್ರಮುಖವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ಉಗ್ರರದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವವನ್ನು ಸಲ್ಲಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ಬಿ.ಎಸ್ಸಿ ವಿಭಾಗದಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ ರಂಜಿತಾ, ರಾಜ್‍ಪಥ್ ರಿಪಬ್ಲಿಕ್ ಡೇ ಪೆರೇಡ್‍ಲ್ಲಿ ಭಾಗವಹಿಸಿದ್ದ ಸಾರ್ಜೆಂಟ್ ಪ್ರೀತಿ ಡಿ. ಯಕ್ಷಗಾನ ಕಲಾವಿದೆ ಅಮೃತಾ ಅಡಿಗ, ಭರತನಾಟ್ಯ ಕಲಾವಿದೆ ಕಾವ್ಯಶ್ರೀ ಅವರನ್ನು ಸನ್ಮಾನಿಸಲಾಯಿತು.

ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಶಿವಪ್ರಸಾದ್ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಶ್ರಾವ್ಯ ಹಾಗೂ ತಂಡದವರು ಪ್ರಾರ್ಥಿಸಿದರು. ನಿಕೇತ್ ಸ್ವಾಗತಿಸಿ ಅರ್ಚನಾ ವಂದಿಸಿದರು. ರೂಪಾಶ್ರೀ ಕಾರ್ಯಕ್ರಮ ನಿರೂಪಿಸಿದರು.