Recent Posts

Monday, January 20, 2025
ಸುದ್ದಿ

ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕಿದೆ: ಮಾಜಿ ಸಿಎಂ ಸಿದ್ದರಾಮಯ್ಯ – ಕಹಳೆ ನ್ಯೂಸ್

ವಿಜಯಪುರ: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ನಮ್ಮ ಸೈನಿಕರು ದಾಳಿ ಮಾಡಿದ್ದಾರೆ. ಆದರೇ ಪಾಕಿಸ್ತಾನ ಸೈನಿಕರ ಮೇಲೆ ದಾಳಿ ಮಾಡಿಲ್ಲ. ಸೈನಿಕರು ಹಾಗೂ ಸೈನಿಕರ ತಾಣಗಳ‌ ಮೇಲೆ ದಾಳಿ ಮಾಡಿಲ್ಲ. ಉಗ್ರರ ತಾಣಗಳ‌ ಮೇಲೆ ಮಾತ್ರ ದಾಳಿ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಜಯಪುರಕ್ಕೆ ಇಂದು ಆಗಮಿಸಿದ ಅವರು ಹೆಲಿಪ್ಯಾಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಪಾಕಿಸ್ತಾನದ ಅಟ್ಟಹಾಸ ಜಾಸ್ತಿಯಾಗಿದೆ. ಪುಲ್ವಾಮದಲ್ಲಿ ಇತ್ತೀಚೆಗೆ 44 ಭಾರತೀಯ ಯೋಧರನ್ನು ಕೊಂದು ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಕಿಸ್ತಾನ ಕಾಲು ಕೆರೆದುಕೊಂಡು ಬಂದರೆ ನಾವು ಸರಿಯಾದ ಪಾಠ ಕಲಿಸಬೇಕಿದೆ ಎಂದು ಸೇನೆಯ ಕಾರ್ಯಾಚರಣೆಯನ್ನು ಸಮರ್ಥಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆಯೂ ಸಹ 1965 ಹಾಗೂ 1971ರಲ್ಲಿ ಪಾಠ ಕಲಿಸಲಾಗಿದೆ. ಈಗಲೂ ಸಹ ತಕ್ಕ ಪಾಠ ಕಲಿಸಬೇಕಿದೆ ಎಂದು ಪಾಕ್ ಗೆ ಎಚ್ಚರಿಕೆ ನೀಡಿದರು.