Friday, September 20, 2024
ಸುದ್ದಿ

ಸಿದ್ಧರಾಮಯ್ಯ ಇನ್ನೂ ಬಚ್ಚಾ | ಪುತ್ತೂರಿನಲ್ಲಿ ಬಿ.ಜೆ.ಪಿ. ಮತ್ತೆ ಅಧಿಕಾರಕ್ಕೆ ಬರುವುದು ಶಥಸಿದ್ಧ ; ಪರಿವರ್ತನಾ ಯಾತ್ರೆಯಲ್ಲಿ – ಯಡಿಯೂರಪ್ಪ.

ಪುತ್ತೂರು : ಭಾರತೀಯ ಜನತಾ ಪಕ್ಷ ದ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆ. ಪುತ್ತೂರಿನಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು.

ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ದುರಾಡಳಿತಕ್ಕೆ ಮಾದರಿಯಾಗಿದೆ. ದೇಶದಲ್ಲೇ ನಂ ೧ ಭ್ರಷ್ಟಾಚಾರ ಹೊಂದಿದ ರಾಜ್ಯ ಕರ್ನಾಟಕ. ಇದು ಕಾಂಗ್ರೆಸ್ ಸಾಧನೆ. ರಾಜ್ಯ ಕಂಡ ಅತ್ಯಂತ ಕೆಟ್ಟ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ. ಅನಾಚಾರ ಅತ್ಯಚಾರ ನಡೆಸುವವರು ಕಾಂಗ್ರೆಸ್ ಪಕ್ಷದ ನಾಯಕರು. ನರೇಂದ್ರ ಮೋದಿಗೆ ನನ್ನನ್ನು ಕಂಡರೆ ಭಯ ಎಂಬ ಸಿ.ಎಂ. ಮಾತಿಗೆ ತಿರುಗೇಟು ನೀಡಿದ ಬಿ.ಎಸ್.ವೈ. ಸಿದ್ದು ಇನ್ನೂ ಬಚ್ಚಾ, ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ಸಿದ್ದರಾಮಯ್ಯರಿಗಿಲ್ಲ ಎಂದು ಲೇವಡಿ ಮಾಡಿದ್ದಾರೆ. ರೈತರ, ಅಡಿಕೆ ಬೆಳೆಗಾರರ ಸಮಸ್ಯೆ ಸ್ಪಂದಿಸುವ ಕೆಲಸ ಮುಂದಿನ ದಿನ ಬಿ.ಜೆ.ಪಿ. ಅಧಿಕಾರಕ್ಕೆ ಬಂದ ಮರುಕ್ಷಣ ಮಾಡುತ್ತೇನೆ, ಕಾಂಗ್ರೆಸ್ ಮೊದಲು ತಮ್ಮ ನಾಯಕರಿಗೆ ಬುದ್ದಿ ಹೇಳಲಿ, ವೇಣುಗೋಪಾಲ್ ನಂತಹ ಅತ್ಯಾಚಾರಿಯನ್ನು ಪಕ್ಷದ ಪ್ರಮುಖ ಸ್ಥಾನದಲ್ಲಿಟ್ಟುಕೊಂಡು ಇವರು ಹೇಗೆ ತಾನೆ ಸಮಾನ್ಯ ಜನರ ಸಮಸ್ಯೆ ಸ್ಪಂದಿಸುತ್ತಾರೆ ಎಂದು ಪ್ರಶ್ನಿಸಿದರು. ಪುತ್ತೂರಿನಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ನರೇಂದ್ರ ಮೋದಿಯವರ ಸ್ವಚ್ಛ ಆಡಳಿತದ ಮಾದರಿ, ಮಹಾತ್ಮ ಗಾಂಧೀಜಿಯವರ ಸ್ವಾಂತಂತ್ರ್ಯ ದೊರಕಿದ ನಂತರ ಕಾಂಗ್ರೆಸ್ಸನ್ನು ವಿಸರ್ಜನೆಗೊಳಿಸಲು ಸೂಚನೆ ನೀಡಿದ್ದರು, ಆದರೆ ಅದು ಅಂದು ಸಹಕಾರವಾಗಿರಲಿಲ್ಲ, ಇಂದು ಮತ್ತೆ ನರೇಂದ್ರ ಮೋದಿಜೀಯವರ ನೇತೃತ್ವದಲ್ಲಿ ಕಾಂಗ್ರೆಸ್ ಮುಕ್ತ ಭಾರತವನ್ನು ಮಾಡುವಲ್ಲಿ ಪುತ್ತೂರಿನ ಜನತೆ ಸಹಕರಿಸಬೇಕು ಎಂದು ವಿನಂತಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಹಿಂದೂ ಹುಡುಗರ ತಂಟೆಗೆ ಬಂದರೆ ನಮ್ಮ ಹುಡುಗರು ಉತ್ತರಕೊಡ್ತಾರೆ – ಶೋಭಾ ಕರಂದ್ಲಾಜೆ

ರಾಜ್ಯದಲ್ಲಿ ಇವತ್ತು ಹಿಂದೂಗಳು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ, ಅಧರ್ಮ ತುಂಬಿಕೊಂಡಿದೆ.


ಟಿಪ್ಪು ಜಯಂತಿಯ ಸಂದರ್ಭದಲ್ಲಿ ಹಿಂದೂ ಯುವಕರಿಗೆ ಬಾಂಡ್ ವಿತರಿಸಿ, ವಾರಂಟ್ ಮಾಡುವ ಕೆಲಸವನ್ನು ಸರಕಾರದ ಮಾತುಕೇಳಿ ಪೊಲೀಸ್ ಇಲಾಖೆ ಮಾಡುತ್ತಿದೆ. ಆದರೆ, ನೆನಪಿರಲಿ ಮುಂದಿನ ಐದು ತಿಂಗಳಿನಲ್ಲಿ ಯಡಿಯೂರಪ್ಪರ ನೇತೃತ್ವದ ಸರಕಾರ ಅಧಿಕಾರ ಬರಲಿದೆ. ಹಿಂದೂ ಯುವಕರ ತಂಟೆಗೆ ಬಂದರೆ ನಮ್ಮ ಹುಡುಗರು ನಿಮಗೆ ಉತ್ತರಕೊಡ್ತಾರೆ ಹುಷಾರು ಎಂದು ಗುಡುಗಿದ್ದಾರೆ.

ಯುವ ನಾಯಕ ಸಹಜ್ ರೈ ಬಿ.ಜೆ.ಪಿ. ಸೇರ್ಪಡೆ :
ಇದೇ ಸಂದರ್ಭದಲ್ಲಿ ಅಪಾರ ಬೆಂಬಲಿಗರೊಂದಿಗೆ ಜಯಕರ್ನಾಟಕದ ಯುವಘಟಕದ ಜಿಲ್ಲಾಧ್ಯಕ್ಷರಾದ ಸಹಜ್ ರೈಯವರು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯ್ಯೂರಪ್ಪನವರ ನೇತೃತ್ವದಲ್ಲಿ ಬಿ.ಜೆ.ಪಿ. ಸೇರ್ಪಡೆಗೊಂಡರು.

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ರವಿ ಕುಮಾರ್, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಜೆ, ತೇಜಸ್ವಿನಿ ರಮೇಶ್, ಅಯನ್ನೂರು ಮಂಜುನಾಥ್ , ನಳೀನ್ ಕುಮಾರ್ ಕಟೀಲ್, ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಶಾಸಕ ಎಸ್ . ಅಂಗಾರ, ಚಿತ್ರನಟ ಕುಮಾರ್ ಬಂಗಾರಪ್ಪ, ಜಿಲ್ಲಾಧ್ಯಕ್ಷ ಸಂಜೀವ ಮಠದೂರು, ಉಮಾನಾಥ ಕೋಟಿಯಾನ್, ಬ್ರಿಜೇಶ್ ಚೌಟ, ಭಾರತೀ ಶೆಟ್ಟಿ , ಮಲ್ಲಿಕಾ ಪ್ರಸಾದ್, ಅಶೋಕ್ ರೈ, ಮುರಳಿ ಹಸಂತಡ್ಕ, ಅರುಣ್ ಪುತ್ತಿಲ, ಗೋಪಾಲಕೃಷ್ಣ ಹೇರಳೆ, ಶಿವರಂಜನ್, ವಿದ್ಯಾ ಆರ್.ಗೌರಿ, ಅನೀಶ್ ಬಡೆಕ್ಕಿಲ ಉಪಸ್ಥಿತರಿದ್ದರು.

Leave a Response