ಪುಲ್ವಾಮಾದಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಭಾರತೀಯ ಯೋಧರು ಬಲಿಯಾಗಿದ್ದು ಇಡೀ ದೇಶವೇ ಪಾಕಿಸ್ತಾನದ ವಿರುದ್ಧ ಪ್ರತಿಕಾರ ತೀರಿಸಲು ಸನ್ನದ್ಧವಾಗಿದೆ.
ಹೌದು ಒಂದು ಕಡೆ ವೀರ ಯೋಧರು ಬಂದೂಕು ಹಿಡಿದು ಗಡಿಯಲ್ಲಿ ನಿಂತು ನಮ್ಮ ರಕ್ಷಣೆ ಮಾಡಿದ್ರೆ, ಇಲ್ಲಿ ಭಾರತದ ರೈತರು ಟೊಮೆಟೋವನ್ನು ಪಾಕಿಸ್ತಾನಕ್ಕೆ ರಫ್ತು ಮಾಡದೆ ‘ಮತ್ತೊಂದು ಹೊಡೆತ ನೀಡಿದ್ದಾರೆ. ಇದ್ರ ಜೊತೆಗೆ ಚಹಾ ವ್ಯಾಪಾರಿಗಳು ಚಹಾ ರಫ್ತು ಮಾಡೋದನ್ನ ನಿಲ್ಲಿಸಿದ್ರು. ಇದೀಗ ಬೀಡಾ ವ್ಯಾಪಾರಿಗಳ ಸರದಿ. ಪಾಕಿಸ್ತಾನಕ್ಕೆ ಬೀಡಾ ಕಳಿಸದೆ ತಮ್ಮ ಪ್ರತಿರೋಧ ತೋರಿಸಿದ್ದಾರೆ.
ಮಧ್ಯ ಪ್ರದೇಶದ ಛತ್ತಾಪುರ ಜಿಲ್ಲೆಯ ಮಹಾರಾಜಪುರ, ಗರ್ಹಿಮಲಹ್ರಾ, ಪಿಪಟ್ ಮತ್ತು ಪನಾಗರ್ ಪ್ರದೇಶಗಳು ಪಾನ್‌ಗೆ ಪ್ರಸಿದ್ಧಿ ಪಡೆದಿವೆ. ಅದ್ರಲ್ಲೂ ಇಲ್ಲಿನ ಮೆಹಬೂಬಾ ಪಾನ್‌ಗೆ ಪಾಕ್‌ನಲ್ಲಿ ಭಾರಿ ಬೇಡಿಕೆ ಇದೆ. ಮೀರತ್ ಮತ್ತು ಶಹರಾನ್‌ಪೂರ್ ಮೂಲಕ ಪಾನ್‌ಗಳು ಪಾಕಿಸ್ತಾನಕ್ಕೆ ರಫ್ತಾಗುತಿತ್ತು.
ಇನ್ನು ವೀಳ್ಯೆದೆಲೆ ರಫ್ತು ಸ್ಥಗಿತಗೊಳಿಸಿರೋದ್ರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತೆ. ಆದ್ರೆ ನಷ್ಟದ ಬಗ್ಗೆ ನಾವು ಚಿಂತೆ ಮಾಡಲ್ಲ. ಕೇಂದ್ರ ಸರ್ಕಾರವೇ ಪಾಕಿಸ್ತಾನಕ್ಕೆ ನೀರು ಹರಿಸಲ್ಲ ಅಂದ ಮೇಲೆ ನಾವ್ಯಾಕೆ ವೀಳ್ಯೆದೆಲೆ ರಫ್ತು ಮಾಡುವುದನ್ನು ನಿಲ್ಲಿಸಬಾರದು ಅಂತಾ ರೈತರು ಪ್ರಶ್ನಿಸಿದ್ದಾರೆ.ಈ ಮೂಲಕ ಪಾಕಿಸ್ತಾನಕ್ಕೆ ಒಂದರ ಹಿಂದೊಂದರಂತೆ ಹೊಡೆತ ನೀಡುತ್ತಿದ್ದು, ಭಾರತದ ಒಗ್ಗಟ್ಟಿನ ಪ್ರದರ್ಶನವಾಗುತ್ತಿದೆ.