Recent Posts

Monday, January 20, 2025
ಸಿನಿಮಾಸುದ್ದಿ

‘ಬನ್ನಿ..ಬಂಡೀಪುರ ಕಾಡಲ್ಲೂ ಗಿಡ ನೆಡೋಣ’ ಎಂದ ದರ್ಶನ್ _ ಕಹಳೆ ನ್ಯೂಸ್

ನವರಸನಾಯಕ ಜಗ್ಗೇಶ್ ಅಭಿನಯದ “ಪ್ರೀಮಿಯರ್ ಪದ್ಮಿನಿ” ಚಿತ್ರದ ಆಡಿಯೋ ಇತ್ತೀಚೆಗೆ ಲಾಂಚ್ ಆಗಿದೆ. ಆಡಿಯೋ ಲಾಂಚ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜಗ್ಗೇಶ್ ಎರಡು ಸಸಿಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ.


ಬಳಿಕ ಮಾತನಾಡಿದ ದರ್ಶನ್, ಕಾಡ್ಗಿಚ್ಚಿಗೆ ಬಂಡೀಪುರದ ಅಭಯಾರಣ್ಯ ಬಹುತೇಕ ಭಸ್ಮವಾಗಿದೆ. ಹಚ್ಚ ಹಸಿರಿನಿಂದ ನಳನಳಿಸುತ್ತಿದ್ದ ಅರಣ್ಯ ಈಗ ಅಲ್ಲಿ ಬೆಂಗಾಡಾಗಿದೆ. ನಾವೆಲ್ಲರೂ ಈಗ ಆ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಬೇಕಾಗಿದೆ. ನಮ್ಮ ನಮ್ಮ ಮನೆ ಸುತ್ತ ಗಿಡ ಬೆಳೆಸುವುದಕ್ಕಿಂತ ಬಂಡೀಪುರದ ಅರಣ್ಯದಲ್ಲೂ ಗಿಡ ನೆಡುವ ಅಗತ್ಯ ಹೆಚ್ಚಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಬೇಕಾದ್ದು ಈಗ ಸಕಾಲಿಕ ಮಾತ್ರವಲ್ಲ ಅನಿವಾರ್ಯ ಕೂಡ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು