Saturday, November 23, 2024
ಸುದ್ದಿ

ಹಿಂದುತ್ವ ನಿಷ್ಠರ ಹತ್ಯೆಯ ತನಿಖೆಯನ್ನು ಸಿ.ಬಿ.ಐ.ಗೆ ಹಸ್ತಾಂತರ ಮಾಡಬೇಕು: ಜನಾರ್ದನ ಗೌಡ – ಕಹಳೆ ನ್ಯೂಸ್

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಜನಾರ್ದನ ಗೌಡ ಮಾತನಾಡಿ “ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಹಿಂದೂ ಮುಖಂಡರ ಹತ್ಯೆಯ ಷಡ್ಯಂತರದ ಬಗ್ಗೆ ಸಿ.ಬಿ.ಐ ತನಿಖೆಗೆ ನೀಡಬೇಕು .ಹಿಂದೂ ಮುಖಂಡರ ಹತ್ಯೆಯನ್ನು ಮಾಡುವ ಜಿಹಾದಿಗಳ ಮೇಲೆ ಶೀಘ್ರವಾಗಿ ಕಠಿಣ ಕಾನೂನು ಕ್ರಮ ಜರುಗಿಸಬೇಕು.

ಹಾಗೆಯೇ ಜೆಮ್ ಶೆಡ್ ಪುರದಲ್ಲಿ ಸುರಕ್ಷತೆ ಇಲ್ಲದೆ ಮನೆ ತ್ಯಜಿಸಿ ಹೋದ 400 ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ಹಿಂದೂಗಳ ಸಂಭಾವ್ಯ ನಿರಾಶ್ರಿತತೆಯನ್ನು ತಡೆಯಲು ಕಾನೂನು ಕ್ರಮ ಜಾರಿಗೊಳಿಸಬೇಕು. ಹಾಗೆಯೇ ಈ ಪ್ರಕರಣದಲ್ಲಿ ತಕ್ಷಣ ಹಸ್ತಕ್ಷೇಪ ಮಾಡಿ ಹಿಂದೂಗಳಿಗೆ ಪೋಲೀಸ್ ರಕ್ಷಣೆಯನ್ನು ನೀಡಬೇಕು.
ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿರುವವರು ಪಿ.ಎಫ್.ಐ ಸಂಘಟನೆಯವರಾಗಿದ್ದು, ಈ  ದೇಶದ್ರೋಹಿ ಐಸಿಸ್ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ  ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಬೇಕು.
ಈ ಸಂದರ್ಭದಲ್ಲಿ ಮದರಸಾಗಳಿಗೆ ನೀಡುವ ಅನುದಾನವನ್ನು ಭಯೋತ್ಪಾದನೆಗಾಗಿ ಉಪಯೋಗಿಸಲಾಗುತ್ತಿದೆ ಈ ವಿಚಾರದ ಬಗ್ಗೆಯೂ ವಿಚಾರಣೆಯನ್ನು ನಡೆಸಬೇಕು.ಜಾತ್ಯಾತೀತ ಭಾರತದಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಮದರಸಾಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಬೇಕು ” ಎಂದು ತಮ್ಮ ವಿಚಾರ ಮಂಡಿಸಿದರು.
ಆಂದೋಲನವನ್ನು ಸಮಿತಿಯ ಶ್ರೀ.ದಯಾನಂದ ಹೆಗ್ಡೆ ಪುತ್ತೂರು ಇವರು ಶಂಖನಾದ ಮಾಡಿ ಪ್ರಾರಂಭಮಾಡಿದರು‌. ಆಂದೋಲನದ ನಿರೂಪಣೆಯನ್ನು ಕು.ಚೇತನಾ ಇವರು ಮಾಡಿದರು.
ಈ ಸಂಧರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ಚಂದ್ರಶೇಖರ್ ,ಶ್ರೀ. ಸಾಂತಪ್ಪ ಮತ್ತು ಧರ್ಮಪ್ರೇಮಿಗಳಾದ ಶ್ರೀ. ಸೋಮನಾಥ, ಶ್ರೀ. ಸತೀಶ್ ಭಂಡಾರಿ, ಶ್ರೀ.ಐತಪ್ಪ ಕೊಡಿಪ್ಪಾಡಿ ಮುಂತಾದವರು ಉಪಸ್ಥಿತಿತರಿದ್ದರು‌.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು