ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಹಾಗೂ ಪಾಕಿಸ್ತಾನ ಗಡಿ ಒಳಗೆ ಭಾರತೀಯ ವಾಯುಸೇನೆ ಉಗ್ರರ ನೆಲೆಗಳನ್ನು ದ್ವಂಸ ಮಾಡಿದ ಬಳಿಕ ಪಾಕಿಸ್ತಾನ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪೋಸ್ಟ್ ಹಾಕಿ ಕಿಡಿಗೇಡಿತನ ಮೆರೆಯುತ್ತಿದ್ದಾರೆ.
ಹೀಗೆ ಪೋಸ್ಟ್ ಹಾಕಿದವರ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗಿದೆ ಮತ್ತು ಪೊಲೀಸ್ ಇಲಾಖೆ ಕೂಡ ಕಠಿಣ ಕ್ರಮ ಕೈಗೊಂಡಿದೆ ಹೀಗಿದ್ದರೂ ರಾಜ್ಯದ ವಿವಿಧೆಡೆ ಪಾಕಿಸ್ತಾನ ಪರವಾಗಿ ಪೋಸ್ಟ್ ಹಾಕಿದ್ದ ಮೂವರು ಯುವಕರನ್ನು ಬಂಧಿಸಲಾಗಿದೆ.
ಹೂವಿನ ಹಡಗಲಿಯಲ್ಲಿ ಹೊಳಲು ಗ್ರಾಮದ ಮೆಹಬೂಬ್ ಮುಜಾವರ್, ಹನೂರು ತಾಲೂಕು ಕೌದಳ್ಳಿಯಲ್ಲಿ ಮೊಹಮ್ಮದ್ ನೌಶಾದ್, ಕೆ.ಆರ್. ಪೇಟೆಯ ಶಫಿ ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ಪರ ಹಾಕಿದ್ದರು. ಈ ಬಗ್ಗೆ ಕ್ರಮ ಕೈಗೊಂಡ ಪೊಲೀಸರು ಯುವಕರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.