ನವದೆಹಲಿ: ಪಾಕ್ ಯೋಧರು ವಿಂಗ್ ಕಮಾಂಡರ್ ಅಭಿನಂದನ್ ಅವರ ಕಣ್ಣಿಗೆ ಬಟ್ಟೆಕಟ್ಟಿ, ಕೈಗಳನ್ನು ಹಿಂದಕ್ಕೆ ಕಟ್ಟಿವಾಹನದಲ್ಲಿ ಕರೆದೊಯ್ದು ವಿಚಾರಣೆ ನಡೆಸಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅವರನ್ನು ಸೇನಾ ಯೋಧರು ಪ್ರಾಣಿಗಳಂತೆ ಕಲ್ಲುಬಂಡೆಗಳ ಮೇಲೇ ಎಳೆದುಕೊಂಡು ಬಂದಿದ್ದಾರೆ.
ಈ ವೇಳೆ ಅವರ ಮುಖವೆಲ್ಲಾ ರಕ್ತಸಿಕ್ತವಾಗಿದ್ದು, ಅವರ ಬಳಿ ಇದ್ದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ತಾನು ಭಾರತದ ಪೈಲಟ್ ಅನ್ನು ಸರೆ ಹಿಡಿದಿರುವುದಾಗಿ ತೋರಿಸಲು ಪಾಕಿಸ್ತಾನ ಈ ಬಿಡುಗಡೆ ಮಾಡಿತ್ತು. ವಿಡಿಯೋಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಭಾರತೀಯ ಸೈನಿಕನನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಜಿನೆವಾ ಒಪ್ಪಂದದ ಪ್ರಕಾರ ಯುದ್ಧ ಅಥವಾ ಸಶಸ್ತ್ರ ಸಂಘರ್ಷದ ವೇಳೆ ದೇಶಗಳು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ನಿಯಮಗಳನ್ನು ವಿಧಿಸುವ ಈ ಒಪ್ಪಂದ 1864ರಲ್ಲಿ ಸ್ವಿಜರ್‌ಲೆಂಡ್‌ನ ಜಿನೆವಾದಲ್ಲಿ ಏರ್ಪಟ್ಟಿದ್ದು, ನಂತರ ಕಾಲಕಾಲಕ್ಕೆ ಪರಿಷ್ಕೃತಗೊಂಡಿದೆ.
ಯುದ್ಧ ಕೈದಿಗಳನ್ನು ಹಿಂಸಿಸಬಾರದು, ಅವರ ಮೇಲೆ ಹಲ್ಲೆ ನಡೆಸಬಾರದು, ಗಾಯಗೊಂಡಿದ್ದರೆ ಉತ್ತಮ ಚಿಕಿತ್ಸೆ ಕೊಡಿಸಬೇಕು. ವಿಚಾರಣೆಯ ನಂತರ ಆತನನ್ನು ಮಾತೃದೇಶಕ್ಕೆ ವಾಪಸ್ ನೀಡಬೇಕು ಒಪ್ಪಂದ ಹೇಳುತ್ತದೆ.