ಪಾಕಿಸ್ತಾನದ ಜೈಷ್-ಏ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‍ನನ್ನ ಗ್ಲೋಬಲ್ ಟೆರರಿಸ್ಟ್ ಎಂದು ಘೋಷಣೆ ಮಾಡುವಂತೆ ಯು.ಕೆ, ಯುಎಸ್ ಮತ್ತು ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಒತ್ತಾಯಿಸಿದೆ.
ಪುಲ್ವಾಮ ದಾಳಿ ಬಳಿಕ ಈತನ ಹೆಸರು ಎಲ್ಲೆಡೆ ಪ್ರಸ್ತಾಪಿಸಲಾಗ್ತಿದ್ದು, ಮಸೂದ್ ಅಜರ್‍ಗೆ ಜಾಗತಿಕ ಮಟ್ಟದಲ್ಲಿ ನಿಷೇಧ ಹೇರಬೇಕು, ಅಲ್ಲದೇ ಈತನ ಜೈಷ್-ಏ-ಮೊಹಮ್ಮದ್ ಸಂಘಟನೆಯನ್ನ ಬ್ಯಾನ್ ಮಾಡಬೇಕು. ಜೊತೆಗೆ ಈತನ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯಿಸಿದೆ.
ಈ ನಿರ್ಧಾರ ಭಾರತದ ಪಾಲಿಗೆ ಮಹತ್ವದಾಗಿದ್ದು ಇದರಿಂದಾಗಿ ಉಗ್ರರ ಮಟ್ಟಕ್ಕಾಗಿ ಭಾರತದ ಪಾಲಿಗೆ ಬಲಾಡ್ಯ ರಾಷ್ಟ್ರಗಳು ಜೊತೆಗಿವೆ ಎಂದು ಸಾರಿವೆ.