Recent Posts

Monday, January 20, 2025
ಸುದ್ದಿ

ಕಟೀಲು ಆರೂ ಮೇಳದ ಕಲಾವಿದರು ಅದಲು ಬದಲು | ಪಟ್ಲರು ಯಾವ ಸೆಟ್ಟಿನಲ್ಲಿ ? ; ಇಲ್ಲದೆ ಮಾಹಿತಿ.

ಕಟೀಲು : ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಆರು ಮೇಳಗಳಲ್ಲಿ ಈ ಭಾರಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆಗಳು ಹಚ್ಚಿದರೆ. ಅತೀ ಬೇಡಿಕೆಯ ಐದನೇ ಮೇಳ ಸೇರಿಂದತೆ ಉಳಿದ ಮೇಳಗಳ ಪ್ರಮುಖ ಕಲಾವಿದರನ್ನು ವರ್ಗಾವರ್ಗಿ ಮಾಡಲು ನಿರ್ಧರಿಸಲಾಗಿದೆ. ಬುಧವಾರ ನಡೆದ ಮೇಳದ ಪ್ರಮುಖ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಹಳೆ ನ್ಯೂಸ್ ಗೆ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಟೀಲು ಮೇಳಗಳಲ್ಲೇ ಪ್ರಮುಖ ಆಕರ್ಷಣೆಯಾಗಿರು ಐದನೇ ಮೇಳದ ಪ್ರಧಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಮತ್ತು ಶ್ರೀನಿವಾಸ ಬಳ್ಳಮಂಜರನ್ನು ನಾಲ್ಕನೇ ಮೇಳಕ್ಕೆ ವರ್ಗಾಯಿಸಲಾಗಿದೆ. ನಾಲ್ಕನೇ ಮೇಳದಲ್ಲಿ ಕಿರಿಯ ಭಾಗವತರಾಗಿದ್ದ ಬಲಿಪರ ಅಳಿಯ ಪುಂಡಿಯೈ ಗೋಪಾಲಕೃಷ್ಣ ಭಟ್ ಬಡ್ತಿಕೊಟ್ಟು ಆರನೇ ಮೇಳಕ್ಕೆ ಕಳುಹಿಸಲಾವುದು. ಆರನೇ ಮೇಳದಿಂದ ಪದ್ಯಾಣ ಗೋವಿಂದ ಭಟ್ಟರು ಐದನೇ ಮೇಳಕ್ಕೆ ಪ್ರಧಾನ ಭಾಗವತರಾಗಿ ಬರಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಐದನೇ ಮೇಳದಲ್ಲಿ ದೇವಿ ಮಹಾತ್ಮೆ ಪ್ರಸಂಗದ ದೇವಿಯಾಗಿ ಜನಪ್ರಿಯಗೊಂಡಿರುವ ಪ್ರಶಾಂತ್ ಶೆಟ್ಟಿ ನೆಲ್ಯಾಡಿಯವರನ್ನು ಆರನೇ ಮೇಳಕ್ಕೆ ಕಳುಹಿಸಲಾಗಿದ್ದರೆ, ಆರನೇ ಮೇಳದ ಸುಣ್ಣಬಂಳ ವಿಶ್ವೇಶ್ಬರ ಭಟ್ಟರನ್ನು ಐದಕ್ಕೆ ಕರೆತರಲಾಗುವುದು. ಐದನೇ ಮೇಳದ ಮ್ಯಾನೇಜರ್ ಸದಾಶಿವ ಶೆಟ್ಟಿ ಆರನೇ ಮೇಳ ಸೇರಲಿದ್ದಾರೆ.
ಈ ನಡುವೆ ಹವ್ಯಾಸ ಭಾಗವತರಾದ ದಿವಾಕರ್ ಆಚಾರ್ಯ ಪೋಳಲಿ ಕಟೀಲು ಮೇಳಕ್ಕೆ ಸೇರ್ಪಡೆ ಸಾಧ್ಯತೆ ಇದೆ. ಇವರಲ್ಲದೆ ಮಂದರ್ತಿ ಮೇಳದ ಹಿರಿಯ ಕಲಾವಿದರಾಗಿದ್ದ ಮುಖ್ಯಪ್ರಾಣ ಕನ್ನಿಗೋಳಿ, ಬಪ್ಪನಾಡು ಮೇಳದ ಭಾಸ್ಕರ ಭಟ್ , ಎಡನೀರು ಮೇಳದಲ್ಲಿರುವ ಸಂತೋಷ್ ಮಾನ್ಯ ಮತ್ತೆ ಕಟೀಲು ಮೇಳಗಳಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

ನಾನು ಭ್ರಮರಾಂಭೆಯ ಸೇವಕ – ಪಟ್ಲ ಸತೀಶ್ ಶೆಟ್ಟಿ

ಮೇಳದ ನಡುವೆ ಕಲಾವಿದರನ್ನು ಬದಲಾಯಿಸುವ ಪ್ರಸ್ತಾಪ ಬಂದಿರುವುದು ನಿಜ. ಆದರೆ ಅದು ಅಂತಿಮ ನಿರ್ಧಾರವೇ ಎಂಬುದು ನನಗೆ ತಿಳಿದಿಲ್ಲ, ಯಾವ ಸೆಟ್ಟಾದರು ನಾನು ಸಿದ್ಧನಿದ್ದೇನೆ, ನನಗೆ ಇಲ್ಲಿ ತಾಯಿ ಭ್ರಮರಾಂಭೆಯ ಸೇವೆ ಮಾಡುವುದಷ್ಟೇ ಲಕ್ಷ್ಯ, ಯಾವ ಸೆಟ್ಟು ಎಂಬುದಲ್ಲ. ಕಟೀಲುನ ಆರು ಮೇಳಗಳಲ್ಲಿ ಯಾವ ಮೇಳಕ್ಕೂ ಭಾಗವತನಾಗಲು ನಾನು ಸಿದ್ಧ.

 

Leave a Response