Tuesday, January 21, 2025
ಸುದ್ದಿ

ಕುಖ್ಯಾತ ಸರಣಿ ಸ್ತ್ರೀ ಹಂತಕ ಸೈನೈಡ್ ಮೋಹನ್‌ಗೆ ಮರಣದಂಡನೆ ತೀರ್ಪು – ಕಹಳೆ ನ್ಯೂಸ್

ಮಂಗಳೂರು: ಕುಖ್ಯಾತ ಸರಣಿ ಸ್ತ್ರೀ ಹಂತಕ ಸೈನೈಡ್ ಮೋಹನ್‌ಗೆ ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ವಿವಿಧ ಹೆಸರುಗಳಿಂದ ರಾಜ್ಯದ 20 ಕ್ಕಿಂತ ಹೆಚ್ಚು ಯುವತಿಯರನ್ನು ಪರಿಚಯಿಸಿಕೊಂಡು ಮದುವೆಯಾಗುವಂತೆ ಪುಸಲಾಯಿಸುತ್ತಿದ್ದ. ಅವರಿಗೆ ಮನೆಯಿಂದ ಚಿನ್ನಾಭರಣ ತರುವಂತೆ ಪ್ರೇರೇಪಿಸಿ ಬೇರೆಡೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರ ಮಾಡುತ್ತಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಅವರನ್ನು ನಂಬಿಸಿ, ವಂಚಿಸಿ ಸೈನೈಡ್ ಕೊಟ್ಟು ಕೊಲೆ ಮಾಡುತ್ತಿದ್ದ. 2004 ರಿಂದ 2009ರ ವರೆಗೆ ಮೋಹನ್ ಮೇಲೆ ಒಟ್ಟು 20 ಪ್ರಕರಣಗಳು ದಾಖಲಾಗಿದ್ದವು.

ಜಾಹೀರಾತು
ಜಾಹೀರಾತು
ಜಾಹೀರಾತು

2010ನೇ ಸಾಲಿನಲ್ಲಿ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಈ ಸಂಬಂಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದೆ.