ಪುತ್ತೂರು: ವಿವೇಕಾನಂದ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ಗಣಿತ ವಿಭಾಗಗಳ ಆಶ್ರಯದಲ್ಲಿ “ಅಫ್ಲಿಕೇಶನ್ಸ್ ಆಫ್ ಗ್ರಾಫ್ ಥಿಯರಿ” ಎಂಬ ವಿಷಯದ ಕುರಿತು ಮಂಗಳವಾರ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಪ್ರಸ್ತುತ ಕಾಲಘಟ್ಟದ ವಿವಿಧ ಕ್ಷೇತ್ರಗಳಲ್ಲಿ ಗ್ರಾಫ್ ಥಿಯರಿಯ ಬಳಕೆ ಮತ್ತು ಉಪಯೋಗಗಳ ಕುರಿತು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕಾರ್ನಾಟಕ ಸುರತ್ಕಲ್, ಇದರ ಗಣಿತ ಮತ್ತು ಗಣನಾತ್ಮಕ ವಿಭಾಗದ ಸಂಯೋಜಕಿ ರಶ್ಮಿ ಯಂ.ಸಂಪನ್ಮೂಲ ವ್ಯಕಿಯಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥ ಪ್ರೊ.ಶಂಕರನಾರಾಯಣ ಭಟ್, ಸಾತಕೋತ್ತರ ಗಣಿತ ವಿಭಾಗದ ಸಂಯೋಜಕಿ ವಿದ್ಯಾ ಸರಸ್ವತಿ ಮತ್ತಿತರ ಉಪನ್ಯಾಸಕರು ಉಪಸ್ಥಿತರಿದ್ದರು. ಉಪನ್ಯಾಸಕಿ ಡಾ.ಮಾನಸ ಯಂ. ಕಾರ್ಯಕ್ರಮ ನಿರೂಪಿಸಿದರು.