Monday, January 20, 2025
ಸುದ್ದಿ

ಗಾಂಜಾ ಮಾರಾಟ ಮಾಡ್ತಾ ಇದ್ದ ಆರೋಪಿ ಸೆರೆ – ಕಹಳೆ ನ್ಯೂಸ್

ಸುಳ್ಯ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಪೆರುವಾಜೆ ಗ್ರಾಮದ ಮುಕ್ಕೂರು ಕಾನಾವು ಕ್ರಾಸ್ ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರಿನ ಸವಣೂರು ಗ್ರಾಮದ ಚಾಪಳ್ಳ ಮನೆ ನಿವಾಸಿ ನೌಫಾಲ್ ಬಂಧಿತ ಆರೋಪಿ. ಆರೋಪಿಯು ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ಸುಮಾರು 9 ಸಾವಿರ ರೂ. ಮೌಲ್ಯದ 500 ಗ್ರಾಂ ಗಾಂಜಾ ಸಮೇತ ಬಜಾಜ್ ಸ್ಕೂಟರ್‍ಅನ್ನು ವಶಪಡಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಕೂಟರ್‍ನ ಮೌಲ್ಯ ಸುಮಾರು 5 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‍ನ ಪುತ್ತೂರು ಉಪ ವಿಭಾಗದ ಡಿವೈಎಸ್‍ಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಎಎಸ್‍ಐಗಳಾದ ಚಿದಾನಂದ ರೈ, ಭಾಸ್ಕರ್, ಎಚ್.ಸಿ.ಬಾಲಕೃಷ್ಣ ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು