Monday, January 20, 2025
ಸುದ್ದಿ

ವಿಶಿಷ್ಠ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಕೊಂಡ ಮಾಜಿ ಶಾಸಕಿ – ಕಹಳೆ ನ್ಯೂಸ್

ಪುತ್ತೂರು: ಇವತ್ತಿನ ದಿನಗಳಲ್ಲಿ ರಾಜಕಾರಣಿಗಳು  ತಮ್ಮ ಹುಟ್ಟಿದ ದಿನವನ್ನು ಐಶಾರಾಮಿಯಾಗಿ ಆಚರಿಸೋದೆ ಹೆಚ್ಚು. ಆದ್ರೆ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ತಮ್ಮ ೭೧ ನೇ ವರ್ಷದ ಹುಟ್ಟು ಹಬ್ಬವನ್ನು ಸರಳವಾಗಿ ವಿಶಿಷ್ಠ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ಬನ್ನೂರು ಸಮೀಪದ ಪ್ರಜ್ಞಾಶ್ರಮದಲ್ಲಿ ಸುಮಾರು ೧೫ ವಿಶಿಷ್ಠ ಮಕ್ಕಳಿದ್ದು, ತಮ್ಮ ಹುಟ್ಟು ಹಬ್ಬದ ಸಂಭ್ರಮವನ್ನ ಇವರೊಂದಿಗೆ ಹಂಚಿಕೊಂಡಿದ್ದು, ಇದು ಇವರ ಸಮಾಜಮುಖಿ ಕಾರ್ಯವನ್ನ ಎತ್ತಿತೋರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭ ಪ್ರಜ್ಞಾಶ್ರಮದ ಅಣ್ಣಪ್ಪ ದಂಪತಿ, ಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ನಯನಾ ರೈ, ವಕೀಲೆ ಹರಿಣಾಕ್ಷಿ ಜೆ, ಸ್ವಾಭಿಮಾನಿ ವೇದಿಕೆಯ ಮನಮೋಹನ್ ರೈ ಹಾಗೂ ಮತ್ತಿತರರು ಸಹಕರಿಸಿದ್ರು.