Recent Posts

Monday, January 20, 2025
ಸುದ್ದಿ

ಪುತ್ತೂರಿನಲ್ಲಿ ಭರದಿಂದ ಸಾಗುತ್ತಿರುವ ಧರ್ಮ ಸಂಸದ್ ಕಾರ್ಯಕ್ರಮದ ಪ್ರಚಾರ ಅಭಿಯಾನ | ಬಜರಂಗದಳ ಕಾರ್ಯಕರ್ತರಿಂದ ಭರ್ಜರಿ ಸಿದ್ಧತೆ.

ಪುತ್ತೂರು : ವಿಶ್ವ ಹಿಂದು ಪರಿಷದ್ ವತಿಯಿಂದ ನವೆಂಬರ್ 24,25,26 ರಂದು ದೇಶದ 2500 ಸಂತರ ನೇತ್ರತ್ವದಲ್ಲಿ ಉಡುಪಿಯಲ್ಲಿ ನಡೆಯುವ ಹಿಂದು ಸಮಾಜದ ಧರ್ಮಚಾರ್ಯರ ಮತ್ತು ಪೀಠಾಧಿಪತಿಗಳ ಮಹಾ ಸಭೆ “ಧರ್ಮ ಸಂಸದ್” ಕಾರ್ಯಕ್ರಮ ಹಾಗೂ ನವೆಂಬರ್ 26 ರಂದು ನಡೆಯುವ ಸುಮಾರು 2 ಲಕ್ಷ ಜನ ತರುಣರು ಸೇರುವ ಬೃಹತ್ ವಿರಾಟ್ ಹಿಂದು ಸಮಾಜೋತ್ಸವದ ಪೂರ್ವಾಬಾವಿಯಾಗಿ ಪುತ್ತೂರಿನಲ್ಲಿ ವಿಶ್ವ ಹಿಂದು ಪರಿಷದ್ ಬಜರಂಗದಳ ದ ಕಾರ್ಯಕರ್ತರಿಂದ ಪುತ್ತೂರು ನಗರದ ಅಯ್ದ ಸ್ಥಳಗಳಲ್ಲಿ ಧರ್ಮ ಸಂಸದ್ ನ ಗೋಡೆ ಬರಹ,ನಗರದಲ್ಲಿ ಪ್ರಚಾರ ಬ್ಯಾನರ್ ಗಳು,ಮನೆ ಸಂಪರ್ಕ ಹಾಗೂ ವಿಶ್ವ ಹಿಂದು ಪರಿಷದ್ ಬಜರಂಗದಳ ಅಟೋ ಚಾಲಕ ಮಾಲಕರ ಘಟಕ ಗರುಡತೇಜ ದ ವತಿಯಿಂದ ಹಿಂದು ಅಟೋ ಚಾಲಕರ ಸಭೆ ಹಾಗೂ ಅಟೋಚಾಲಕರ ರಿಕ್ಷಾ ಕ್ಕೆ ಧರ್ಮ ಸಂಸದ್ ವಿರಾಟ್ ಹಿಂದು ಸಮಾಜೋತ್ಸವದ ಸ್ಟಿಕ್ಕರ್ ಅಂಟಿಸುವ ಅಭಿಯಾನ ನಡೆಯುತ್ತಿದ್ದು ಪುತ್ತೂರಿನಲ್ಲಿ ಧರ್ಮ ಸಂಸದ್ ನ ಪ್ರಚಾರ ಅಭಿಯಾನ ಭರದಿಂದ ಸಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ಸ್ತರಗಳಲ್ಲಿ ವಿವಿಧ ಸಭೆಗಳು ನಡೆಯುತ್ತಿದ್ದು ನವೆಂಬರ್ 26 ರಂದು ಪುತ್ತೂರಿನಿಂದ ಉಡುಪಿಯ ಧರ್ಮ ಸಂಸದ್ ನ ವಿರಾಟ್ ಹಿಂದು ಸಮಾಜೋತ್ಸವಕ್ಕೆ ಸಾವಿರಾರು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response