Recent Posts

Monday, January 20, 2025
ಸುದ್ದಿ

ತಯಾರಾಯ್ತು ಸರ್ಜಿಕಲ್ ದಾಳಿಯ ಚಿತ್ರವನ್ನೊಳಗೊಂಡ ಸೀರೆ

ಪಾಕ್ ನೆಲಕ್ಕೆ ನುಗ್ಗಿ ಉಗ್ರರನ್ನು ಸದೆಬಡಿದ ವಿಚಾರ ಎಲ್ಲರಿಗೂ ತಿಳಿದೇ ಇದೆ, ಭಾರತೀಯ ವಾಯುಸೇನೆ ತೋರಿದ ಶಕ್ತಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಈ ಮಧ್ಯೆ ಸರ್ಜಿಕಲ್ ದಾಳಿಯಾಗುತ್ತಿದ್ದಂತೇ ಸೂರತ್‌ನ ಬಟ್ಟೆ ವ್ಯಾಪಾರಿಯೋರ್ವರು ಕೇವಲ ನಾಲ್ಕು ಗಂಟೆಗಳಲ್ಲಿ ಭಾರತೀಯ ವಾಯುಸೇನೆಯ ಸೈನಿಕರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವುಳ್ಳ ವಿಶೇಷ ಸೀರೆಯನ್ನು ತಯಾರಿಸಿದ್ದಾರೆ.

ವಿನೋದ್ ಸುರಾನಾ ಎಂಬ ಬಟ್ಟೆ ವ್ಯಾಪಾರಿ, ಕೇವಲ ನಾಲ್ಕು ಗಂಟೆಗಳಲ್ಲಿ ವಿಶೇಷ ಸೀರೆಯೊಂದನ್ನು ತಯಾರಿಸಿದ್ದು, ಇದರಲ್ಲಿ ವಾಯುಸೇನೆಯ ಧೀರ ಸೈನಿಕರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿದೆ. ಅಲ್ಲದೇ ಸೀರೆಯ ಒಂದು ಕೊನೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ.
ಇನ್ನು ವಿನೋದ್ ಸುರಾನಾ ತಯಾರಿಸಿರುವ ಸೀರೆ ಭಾರೀ ಜನಪ್ರಿಯತೆ ಗಳಿಸಿದ್ದು, ಜನರಿಂದ ಹೆಚ್ಚಿನ ಸೀರೆಗಳಿಗೆ ಬೇಡಿಕೆ ಬರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು